ನಾ ಸಾಗಿದೆನು ಬದುಕಿನ ಜೊತೆ ರಾಜಿಯಾಗುತಾ

ಮೂಲ ... ಸಾಹಿರ್ ಲುಧಿಯಾನವಿ
ಕನ್ನಡಕ್ಕೆ ... ಸಿಪಿರವಿಕುಮಾರ್

(ಹಮ್ ದೋನೋ ಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಗೀತೆಯನ್ನು ಮೊಹಮ್ಮದ್ ರಫಿ ಹಾಡಿದ್ದಾರೆ. ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ ಎಂದು ಪ್ರಾರಂಭವಾಗುವ ಈ ಹಾಡನ್ನು ತೆರೆಯ ಮೇಲೆ ದೇವ್ ಆನಂದ್ ನಿರೂಪಿಸಿದ್ದಾರೆ.)

Smoke
ನಾ ಸಾಗಿದೆನು ಬದುಕಿನ ಜೊತೆ ರಾಜಿಯಾಗುತಾ!
ಚಿಂತೆಯನ್ನು ಧೂಮದಲ್ಲಿ ಮಾಯ ಮಾಡುತಾ!

ಹಾಳಾದುದಕ್ಕೆ ವ್ಯರ್ಥ ಶೋಕದಾಚರಣೆಗಳು!
ಹಾಳಾದುದಕ್ಕೆ ಸಾಗಿದೆ ನಾ ಹಬ್ಬ ಮಾಡುತಾ

ಗುರಿಯೆಂದು ಬಗೆದೆ ನಾನು ಕೈಗೆ ಪ್ರಾಪ್ತವಾದುದು
ಸಾಗಿದೆ ನಾ ಕಳೆದುಹೋದುದನ್ನು ಮರೆಯುತ

ನೋವು ನಲಿವುಗಳಲ್ಲಿ ಎಲ್ಲಿ ಭೇದವಿಲ್ಲವೋ
ನಾ ಸಾಗಿದೆ ಮನವನತ್ತ ಕಡೆಗೆ ದೂಡುತ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)