ನೀಡುವಿರಿ ಶಿಕ್ಷೆ

ಮೂಲ .. ಸಾಹಿರ್‌ ಲುಧಿಯಾನವಿ
ಕನ್ನಡಕ್ಕೆ ... ಸಿಪಿರವಿಕುಮಾರ್
"ಜುರ್ಮ್-ಎ-ಉಲ್ಫತ್ ಕಿ ಹಮೇಂ ಲೋಗ್ ಸಜಾ ದೇತೇ ಹೈನ್" ಎಂದು ಪ್ರಾರಂಭವಾಗುವ ಈ ಗೀತೆಯನ್ನು "ತಾಜ್ ಮಹಲ್" ಹಿಂದಿ ಚಿತ್ರದಲ್ಲಿ ಬಳಸಲಾಗಿದೆ. ಇದನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. "ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ?" ಗೀತೆಗೂ ಇದಕ್ಕೂ ಇರುವ ಸಾಮ್ಯವನ್ನು ಗಮನಿಸಬಹುದು.

Black and White Photo of Holding Hands

ನೀಡುವಿರಿ ಶಿಕ್ಷೆ ಪ್ರೇಮಾಂಕುರದ ಪಾಪಕ್ಕೆ
ಗಾಳಿ ನೀಡುವಿರಿ ಮಂದಾಗ್ನಿಗೆ, ಮುನ್ನೆಚ್ಚರಿಕೆ!

ಭ್ರಮಿತಮತಿಯೇ ನಾವು, ತ್ಯಜಿಸುವೆವೆ ಪರಸ್ಪರರ?
ನೀಡುವೆವು ಪ್ರಾಣವನ್ನೇ ಮಾಡಿದ ವಾಗ್ದಾನಕ್ಕೆ

ಹೃದಯಗಳ ತೂಗುವಿರಾ ಸ್ವರ್ಣದ ತಕ್ಕಡಿಯಲ್ಲಿ!
ನಾವು ನೀಡುವೆವು ಪ್ರತಿಪ್ರೇಮವನೇ ಪ್ರೇಮಕ್ಕೆ

ಮಹಲು ಸಿಂಹಾಸನವು ಧನಕನಕಗಳೇನು ಮಹಾ!
ಪ್ರೇಮಿಗಳು ಸಿದ್ದ ದಿವ್ಯಾಮೃತದ ತ್ಯಾಗಕ್ಕೆ!

ಬೆಸೆದುಕೊಂಡಿವೆ ಹೃದಯ, ಒಂದು ನಮ್ಮ ಪ್ರಾಣಗಳು
ಸಿದ್ದರಾಗಿಹೆವು, ಶಿಕ್ಷೆ ನೀಡಿರಿ ಮನಸೋ ಇಚ್ಛೆ

ಮೂಲ .. ಸಾಹಿರ್‌ ಲುಧಿಯಾನವಿ
ಕನ್ನಡಕ್ಕೆ ... ಸಿಪಿರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)