ಸಂಜೆ ಮನೆಮಾಡುತಿದೆ
ಮೂಲ ... ಸಾಹಿ ಲುಧಿಯಾನವಿ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
(ಪರ್ಬತೋಂಕೆ ಪೇಡೋoಪರ್ ... ಎಂಬ ಈ ಗೀತೆಯನ್ನು ಸುಮನ್ ಕಲ್ಯಾಣ್ ಪುರ್ ಮತ್ತು ಮೊಹಮದ್ ರಫಿ ಅವರ ಕಂಠದಲ್ಲಿ ನೀವೂ ಕೇಳಬಹುದು.)

ಸಂಜೆ ಮನೆಮಾಡುತಿದೆ ಪರ್ವತದ ಮರಗಳಲಿ
ಕೆಂಪು ಸಂಜೆಯ ಬೆಳಕು, ನೀಲನೇರಳೆ ಇರುಳು
ಹೃದಯಗಳೆರಡು ಕ್ಷಣ ಒಂದಾಗುವ ಘಳಿಗೆ
ಬಣ್ಣದೋಕುಳಿಯಲ್ಲಿ ಮೀಯಿಸುತಿದೆ ಮುಗಿಲು
ನಿಂತ ನೀರೊಳು ಗೀತೆ ಸರಸರ ಹರಿಯುತ್ತಿದೆ
ಮಂಜಿನೊಂದಿಗೆ ಗಂಧ ಬೆರೆಸುವ ತಂಬೆಲರು
ಬನ್ನಿ ಒಂದಾಗುವ ಈ ಚಿತ್ರಮಯ ಸಂಜೆಯೊಳು
ಮುನ್ನಡಿಯ ಬರೆಯುತ್ತಿದೆ ಮುಂಬೆಳಗಿಗೆ ಇರುಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ