ಮೂಲ: ಮಹಾತ್ಮಾ ಕಬೀರ್ ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ ಇಸವಿ ೧೩೯೮. ಇಂದಿನ ಕಾಶಿಗೆ (ಬನಾರಸ್) ಹತ್ತಿರದಲ್ಲಿರುವ ಲಹರ್ತಾರಾ ಎಂಬ ಸ್ಥಳದಲ್ಲಿ ಒಬ್ಬ ಬ್ರಾಹ್ಮಣ ವಿಧವೆಯ ಹೊಟ್ಟೆಯಲ್ಲಿ ಒಂದು ಗಂಡು ಮಗು ಜನಿಸಿತು. ಸಮಾಜದ ನಿಂದೆಗೆ ಹೆದರಿದ ಆಕೆ ಮಗುವನ್ನು ತೊರೆದು ಹೋದಳು. ನೀರೂ ಮತ್ತು ನೀಮಾ ಎಂಬ ಬಡ, ಅನಕ್ಷರಸ್ಥ ಮುಸಲ್ಮಾನ ದಂಪತಿಗಳು ಈ ಮಗುವನ್ನು ಸಾಕಿದರು. ಈ ಮಗುವೇ ಮುಂದೆ ಮಹಾತ್ಮಾ ಕಬೀರ್ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಸಾಕು ತಂದೆ ತಾಯಿಯರು ವೃತ್ತಿಯಲ್ಲಿ ನೇಕಾರರು. ಈ ಮಗುವನ್ನು ಸಂತ ರಾಮಾನಂದರು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರೀ ರಾಮಾನಂದರು ದೇಹತ್ಯಾಗ ಮಾಡಿದಾಗ ಕಬೀರನಿಗೆ ೧೩ ವರ್ಷ ವಯಸ್ಸು. ಕಬೀರನಿಗೆ ದೊರೆತ ಶಿಕ್ಷಣ ಯಾವ ಬಗೆಯದು ಎಂಬುದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಅವನು ಸನ್ಯಾಸ ಸ್ವೀಕರಿಸಲಿಲ್ಲ. ಒಬ್ಬ ಗೃಹಸ್ಥನಾಗಿ, ನೇಕಾರನಾಗಿ, ಚಿಂತಕನಾಗಿ ಸಮನ್ವಯದ ಬದುಕನ್ನು ಜೀವಿಸಿದ. ಭಗೋದಾಸ ಮತ್ತು ದರ್ಮದಾಸ ಎಂಬ ಅವನ ಇಬ್ಬರು ಶಿಷ್ಯರು ಅವನ ವಾಣಿಯನ್ನು ಬರೆದಿಟ್ಟರು ಎಂಬ ಪ್ರತೀತಿ ಇದೆ. ಆದರೆ ಅವನ ದ್ವಿಪದಿಗಳು ಮತ್ತು ಭಜನೆಗಳು ಬಾಯಿಂದ ಬಾಯಿಗೆ ಸಾಗಿ ಬಂದಿದ್ದೆ ಹೆಚ್ಚು. ಅವನ ದ್ವಿಪದಿಗಳನ್ನು ಶ್ಲೋಕಗಳೆಂದೂ, ಸಾಖಿಗಳೆಂದೂ ಕರೆಯುತ್ತಾರೆ. ಸಾಖಿ ಎಂದರೆ ಸಾಕ್ಷಿ. ಅವನ ಅನುಯಾಯಿಗಳಿಗೆ ಅವನ ವಾಣಿ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ