ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ
ಸಾನೆಟ್ಸ್ ಫ್ರಮ್ ದ ಪೋರ್ಚುಗೀಸ್ - 3
ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ಮೂರನೇ ಸಾನೆಟ್. ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಿಯಕರನು ಪ್ರೇಮ ನಿವೇದನೆ ಮಾಡಿದಾಗ ಕವಿತೆಯ ನಾಯಕಿಗಯ ಮನದಲ್ಲಿ ತನ್ನ ಮತ್ತು ತನ್ನ ಪ್ರಿಯಕರನ ನಡುವೆ ತಾಳೆಯಾಗುವುದೇ ಎಂಬ ಆಲೋಚನೆ ಮೂಡುತ್ತದೆ. ತಮ್ಮ ಜೀವನ ಎಷ್ಟು ವಿಭಿನ್ನ ಎಂದು ಅವಳು ಚಿಂತಿಸುತ್ತಾಳೆ. ತಮ್ಮ ನಕ್ಷತ್ರದೇವತೆಗಳು ಕೂಡಾ ವಿರುದ್ಧ ದಿಕ್ಕುಗಳಲ್ಲಿ ಹಾರಾಡುತ್ತಿದ್ದವು! ಒಂದರ ರೆಕ್ಕೆ ಇನ್ನೊಂದಕ್ಕೆ ಅಕಸ್ಮಾತ್ ಬಡಿದಾಗ ಅವುಗಳೂ ಆಶ್ಚರ್ಯಚಕಿತವಾಗಿವೆ! ಈ ಮಿಲನ ಸಾಧ್ಯ ಎಂಬುದು ದೇವತೆಗಳಿಗೂ ಊಹಿಸಲು ಸಾಧ್ಯವಾಗಿರಲಿಲ್ಲ! ತನ್ನ ಪ್ರಿಯಕರನೋ ಒಬ್ಬ ರಸಿಕ. ಅವನ ಒಡನಾಟ ಐಶ್ವರ್ಯವಂತರೊಂದಿಗೆ. ಅಲ್ಲಿಯ ಜಗಮಗ ಬೆಳಕಿನಲ್ಲಿ ಅವನನ್ನು ದಿಟ್ಟಿಸಿನೋಡುವ ಅದೆಷ್ಟು ತೇಜಃಪೂರ್ಣ ಕಣ್ಣುಗಳಿವೆ! ಇವರೆಲ್ಲರನ್ನೂ ಬಿಟ್ಟು ಅವನೇಕೆ ತನ್ನಲ್ಲಿ ಅನುರಕ್ತನಾಗಿದ್ದಾನೆ? ಸಾವಿನಲ್ಲಿ ಮಾತ್ರ ತಮ್ಮ ಮಿಲನ ಸಾಧ್ಯವೆಂಬ ಆಲೋಚನೆ ಅವಳನ್ನು ಅಧೀರಳನ್ನಾಗಿ ಮಾಡುತ್ತದೆ.
ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ ನಿನ್ನ
ರಾಜಸೀ ಹೃದಯಕ್ಕೆ? ನಮ್ಮ ಧ್ಯೇಯೋದ್ದೇಶಗಳು ಕೂಡಾ ಭಿನ್ನ!
ಚಕಿತವಾಗಿವೆ ನಮ್ಮ ನಕ್ಷತ್ರದೇವತೆಗಳು ಕೂಡಾ ಒಂದು ಇನ್ನೊಂದಕ್ಕೆ
ತಗುಲಿದಾಗ ವಿರುದ್ಧ ದಿಕ್ಕುಗಳ ಹಾರಾಟದಲ್ಲಿ ಪರಸ್ಪರರ ರೆಕ್ಕೆ!
ನೀನಾದರೋ ಉತ್ಸವಗಳಲ್ಲಿ ಅರಸಿಯರ ಅಕ್ಕರೆಯ ಅತಿಥಿ!
ನೆಟ್ಟಿರುತ್ತವೆ ನಿನ್ನಮೇಲೆ ನೂರಾರು ಹೊಳೆವ ಕಂಗಳ ದೃಷ್ಟಿ -
ಕಂಬನಿಯೂ ನೀಡಲಾರದು ಅಂಥ ಹೊಳಪು ನನ್ನ ಕಂಗಳಿಗೆ!
ನಿನ್ನ ಗೋಷ್ಟಿಯ ಮುಖ್ಯಗಾಯಕಿಯಾಗೆನ್ನುವೆಯಲ್ಲ, ಹೇಗೆ!
ಆನಂತರ ನಿನಗೇನು ಕೆಲಸ ಉಳಿದೀತು?
ತೆರೆಮರೆಯಿಂದ ನನ್ನ ಕಡೆ ನೋಡುವ ಹೊರತು!
ಸೋತ ಕಳೆ ಹೊತ್ತು ಅಲೆದಾಡುವ ಬಡ ಜೋಗಿಣಿ ನಾನು!
ಕಾಡುಗತ್ತಲಲ್ಲಿ ಹಾಡುತ್ತಾ ದೇವದಾರುವಿಗೆ ಒರಗಿಹೆನು.
ನಿನ್ನ ತಲೆಯ ಮೇಲಿದೆ ತೀರ್ಥ, ನನ್ನ ತಲೆಯ ಮೇಲೆ ಇಬ್ಬನಿ ಮಾತ್ರ ,
ಒಪ್ಪಿಗೆ ಕೂಡಿಸುವುದು ಇವುಗಳ ನಡುವೆ ಸಾವಿನ ಪಾತ್ರ.
(c) ಸಿ. ಪಿ. ರವಿಕುಮಾರ್, 2017

Unlike are we, unlike, O princely Heart!
ಪ್ರತ್ಯುತ್ತರಅಳಿಸಿUnlike our uses and our destinies.
Our ministering two angels look surprise
On one another, as they strike athwart
Their wings in passing. Thou, bethink thee, art
A guest for queens to social pageantries,
With gages from a hundred brighter eyes
Than tears even can make mine, to play thy part
Of chief musician. What hast thou to do
With looking from the lattice-lights at me,
A poor, tired, wandering singer, singing through
The dark, and leaning up a cypress tree?
The chrism is on thine head,-- on mine, the dew, --
And Death must dig the level where these agree.