ನಿಂತನಿಂತಲ್ಲೇ ನಿದ್ರೆ

ಮೂಲ: ಕ್ಸು ಲಿಷೀ (ಚೈನಾ)
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 


ಕಣ್ಣಮುಂದಿನ  ಪೇಲವ ಹಳದಿ ಕಾಗದದ  ಮೇಲೆ 
ಸ್ಟೀಲ್ ಕಡ್ಡಿಯಿಂದ  ಕಪ್ಪು ಬಣ್ಣದಲ್ಲಿ ಬರೆಯುತ್ತೇನೆ 
ಉದ್ಯೋಗಕ್ಕೆ ಸಂಬಂಧಿಸಿದ  ಪದಗಳನ್ನು:
ವರ್ಕ್ ಶಾಪ್, ಅಸೆಂಬ್ಲಿ  ಲೈನ್, ಮಷೀನ್, 
ವರ್ಕ್ ಕಾರ್ಡ್, ವೇಜಸ್, ಓವರ್ ಟೈಮ್, ... 

ನನಗೆ ಅವರು ನೀಡಿದ್ದಾರೆ ವಿಧೇಯತೆಯ ತರಬೇತಿ 
ಕೂಗಾಡಲು, ಪ್ರತಿಭಟಿಸಲು ನನಗೆ ತಿಳಿಯದು 
ದೂರಲು, ಬೇಡವೆನ್ನಲು ಬಾರದು 
ಬರುವುದೇನಿದ್ದರೂ ಮೌನವಾಗಿ ಸಹಿಸಿಕೊಳ್ಳುವುದು ಸುಸ್ತನ್ನು 

ಈ ಜಾಗಕ್ಕೆ ಮೊದಲಸಲ ಬಂದಾಗ
ಪ್ರತಿತಿಂಗಳೂ ಹತ್ತನೇ ತಾರೀಕಿಗಾಗಿ ಹಾತೊರೆಯುತ್ತಿದ್ದೆ 
ಪಗಾರದ ಕಂದು ಬಣ್ಣದ ಚೀಟಿಯ ಸಾಂತ್ವನದ ಬದಲಾಗಿ 
ನಾನು ಅರೆದು ನುಣುಪು ಮಾಡುತ್ತಿದ್ದೆ 
ನನ್ನ ಮತ್ತು ನನ್ನ ಪದಗಳ ಚೂಪುಗಳನ್ನು 

ಕೆಲಸಕ್ಕೆ ತಪ್ಪಿಸಿಕೊಳ್ಳಲು ನಿರಾಕರಿಸುತ್ತಿದ್ದೆ 
ಅನಾರೋಗ್ಯ ರಜೆಯನ್ನು ನಿರಾಕರಿಸುತ್ತಿದ್ದೆ,
ಖಾಸಗೀ ಕೆಲಸಕ್ಕಾಗಿರುವ ರಜೆಯನ್ನು ನಿರಾಕರಿಸುತ್ತಿದ್ದೆ,
ತಡವಾಗಿ ಬರಲು ನಿರಾಕರಿಸುತ್ತಿದ್ದೆ,
 ಬೇಗ ಹೊರಡಲು ನಿರಾಕರಿಸುತ್ತಿದ್ದೆ. 

ಅಸೆಂಬ್ಲಿ ಲೈನ್ ಬದಿಗೆ ನಿಂತಿರುತ್ತಿದ್ದೆ ನಾನು 
ನೇರವಾಗಿ ಕಬ್ಬಿಣದ ಸಲಾಕೆಯ ಹಾಗೆ 
ಕೈಗಳು ಹಾರಾಟದಲ್ಲಿದ್ದಂತೆ 
ಅದೆಷ್ಟು ದಿವಸ, ಅದೆಷ್ಟು ರಾತ್ರಿ
ನಾನು ಹಾಗೇ ನಿಂತನಿಂತಲ್ಲೇ ನಿದ್ರಿಸಿದ್ದೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)