ಅರ್ಧ ದಾರಿ ಮೇಲೆ



ಮೆಟ್ಟಿಲನೇರುತ ನಡುವಿನ ಮೆಟ್ಟಿಲ ಮೇಲೆ ಕೂಡುವೆನು ನಾನು

ಇದುವೇ ನನ್ನಯ ಮೆಚ್ಚಿನ ಮೆಟ್ಟಿಲು, ಏತಕೆ ಎನ್ನುವಿರೇನು?

ಮೇಲೂ ಅಲ್ಲದ ಕೆಳಗೂ ಅಲ್ಲದ ನಡುವಣ ಮೆಟ್ಟಿಲು ಚೆನ್ನ

ಕುಳಿತುಕೊಳ್ಳದೇ ಇದ್ದರೆ ಅಲ್ಲಿ, ಕರಗದು ತಿಂದ ಮೊಸರನ್ನ.


ಅಂತ್ಯವಲ್ಲ , ಆರಂಭವೂ ಅಲ್ಲ ಎಲ್ಲೋ ಇದೆ ನಡುವಿನಲಿ!

ಮುಂದಿನ ಬೆಂಚಿನ ಮೌನಿಯೂ ಅಲ್ಲ, ಅಲ್ಲ ಹಿಂದಿನ ಬೆಂಚ್ ವಾಚಾಳಿ!

ಏನೇನೋ ಆಲೋಚನೆ, ಕಲ್ಪನೆ, ಬರುವುವು ಇಲ್ಲಿ ಕುಳಿತಾಗ,

ಕೇಳದಿರಿ ಆಲೋಚನೆ ಏತಕೆ ಏಐ ಏರ್ ಪ್ಲೇನ್ ಏರಿರುವಾಗ!


ಮೂಲ: ಏ ಏ ಮಿಲ್ನ್ 

ಭಾವಾನುವಾದ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)