ಕವಿತೆ
ಹಿಂದಿ ಮೂಲ : ಅಂಜನಾ ಬಕ್ಷಿ
ಕನ್ನಡಕ್ಕೆ : ಸಿ ಪಿ ರವಿಕುಮಾರ್
ಕವಿತೆ ನನ್ನನ್ನು ಬರೆಯುತ್ತದೋ
ನಾನು ಕವಿತೆಯನ್ನೋ
ತಿಳಿಯುತ್ತಿಲ್ಲ
ಒಳಗಿನ ತುಮುಲವು
ಕುದ್ದು ಹೊರಬಂದಾಗ
ಕವಿತೆ ಮೂಡಿಸುತ್ತದೆ ಶಬ್ದಗಳನ್ನು
ಮತ್ತು ಶಬ್ದಗಳಿಂದ ಹೊರಸೂಸುತ್ತದೆ ಕವಿತೆ
ಹೇಗೆ ಕಟ್ಟೆಯಿಂದ ಸಂಸತ್ತಿನವರೆಗೂ
ಮೂಡುತ್ತವೋ ಪಾಪದ ಅಸಂಖ್ಯ ಕತೆಗಳು
ಹಾಗೇ
ಮುಷ್ಟಿ ತುಂಬ ಶಬ್ದಗಳು
ಹೊಮ್ಮಿಸುತ್ತವೆ ಕಾಗದದ ಮೇಲೆ
ಎಣಿಕೆ ಮೀರಿದಷ್ಟು ಕವಿತೆಗಳನ್ನು
ಈ ಕವಿತೆಗಳಲ್ಲಿ ಮೈದಳೆದ ಅಕ್ಷರಗಳು
ಚೂಪಾಗಿ, ಉರುಟಾಗಿ, ಓರೆಕೋರೆಯಾಗಿವೆ
ನೇರವಾಗಿ, ಚಪ್ಪಟೆಯಾಗಿ, ಸಹಜವಾದ
ಅಕ್ಷರಮಾಲೆಯಂತಲ್ಲ
http://kavitakosh.org/kk/%E0%A4%95%E0%A4%B5%E0%A4%BF%E0%A4%A4%E0%A4%BE_/_%E0%A4%85%E0%A4%82%E0%A4%9C%E0%A4%A8%E0%A4%BE_%E0%A4%AC%E0%A4%96%E0%A5%8D%E0%A4%B6%E0%A5%80
ಪ್ರತ್ಯುತ್ತರಅಳಿಸಿ