ದೂರುಗಳ ನಗರ

ಸಿ ಪಿ ರವಿಕುಮಾರ್


ಕಂಪನಿ ಬಸ್ ನಲ್ಲಿ ಇಂದು ಜಗಳ. ಒಬ್ಬಾಕೆಯ ಪಕ್ಕದಲ್ಲಿ ಇನ್ನೊಬ್ಬ ಕೂತಿದ್ದಾನೆ. ಆಕೆ ತಮ್ಮಿಬ್ಬರ ನಡುವೆ ಒಂದು ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಾಳೆ. ಬಸ್ ಅಲುಗಾಡುತ್ತಾ ಇರುವಾಗಲೋ ಅಥವಾ ನಿದ್ದೆ ಬಂದ ಕಾರಣವೋ ಈ ಬ್ಯಾಗ್ ಆತನ ತೊಡೆಯ ಮೇಲೇ ಬಂದು ಕೂತಿದೆ.

ಆತ ಪ್ರತಿಭಟಿಸಿದ.  "ನೀವು ಬ್ಯಾಗ್ ತೆಗೆದು ಕೆಳಕ್ಕಿಡಿ,ಇಲ್ಲಿ ನೀವು ಅರ್ಧಕ್ಕಿಂತ ಹೆಚ್ಚು ಸೀಟ್ ಆಕ್ರಮಿಸಿಕೊಂಡಿದ್ದೀರಿ."

 "ಇಲ್ಲ, ನಾನು ಬ್ಯಾಗ್ ತೆಗೆದಿಡುವುದು  ಸಾಧ್ಯವಿಲ್ಲ. ನಾನು ಹೆಂಗಸು. ನಿಮ್ಮ ಪಕ್ಕ ಹಾಗೆ ನಾನು ಕೂತುಕೊಳ್ಳುವುದು ಸಾಧ್ಯವಿಲ್ಲ."

"ನೀವೇನು ಈ ಸೀಟ್ ರಿಸರ್ವ್ ಮಾಡಿಸಿದ್ದೀರಾ?"

"ನೀವು ಮಾಡಿಸಿದ್ದೀರಾ?"

ಆತನಿಗೆ ಸಿಟ್ಟು ಬಂತು. ಮೇಲೆದ್ದು "ಡಿಸ್ಗಸ್ಟಿಂಗ್" ಎಂದು ಬೈದ.

"ನೀನು ಡಿಸ್ಗಸ್ಟಿಂಗ್!" ಎಂದು ಆಕೆ ಜೋರು ಧ್ವನಿಯಲ್ಲಿ ಕಿರುಚತೊಡಗಿದಳು. ಅವನ ಬಗ್ಗೆ, ಅವನ "ಸಂಸ್ಕೃತಿ" ಬಗ್ಗೆ, ಐ.ಟಿ. ಕೆಲಸಗಾರರ ಬಗ್ಗೆ, ಅವನ "ಕೊಳೆತ ಬುದ್ಧಿ" ಬಗ್ಗೆ ಕಿರುಚಾಡಿದಳು. ಕೊನೆಗೆ "ನಾನು ಪೊಲೀಸರಿಗೆ ಫೋನ್ ಮಾಡಿದರೆ ನೀನು ಕಂಬಿ ಎಣಿಸುತ್ತೀಯ!" ಎಂದು ಹೆದರಿಸಿದಳು.

ಆತ "ಹೌದು, ನೀವು ಹೆಂಗಸು, ನಾನು ಗಂಡಸು, ಅಷ್ಟೇ ವ್ಯತ್ಯಾಸ" ಎಂದು ಮೇಲೆದ್ದು ಬೇರೆಲ್ಲೋ ಜಾಗ ಹುಡುಕಿಕೊಂಡು ಕುಳಿತುಕೊಂಡ.  ಸ್ವಲ್ಪ ಹೊತ್ತು ಅವನು ಗೊಣಗುತ್ತಲೇ ಇದ್ದ.

ಎಲ್ಲರೂ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ನಾನು ಜಸ್ಲೀನ್ ಪರ-ವಿರೋಧ ವಾದಗಳನ್ನು ಓದುತ್ತಿದ್ದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)