ವಿಲಕ್ಷಣವಾಗಿತ್ತು ಆ ಸಂಜೆ
ಖಾಮೋಶಿ ಚಿತ್ರಕ್ಕಾಗಿ ಗುಲ್ಜಾರ್ ಅವರು ಬರೆದ ಈ ಗೀತೆಯನ್ನು ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಕಿಶೋರ್ ಕುಮಾರ್ ಹಾಡಿದ್ದಾರೆ. ಈ ಗೀತೆ ಎಪ್ಪತ್ತು-ಎಂಬತ್ತರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಈ ಚಿತ್ರದ ನಾಯಕನಿಗೆ ಪ್ರೇಮದಲ್ಲಿ ನಿರಾಸೆಯುಂಟಾಗಿ ಅವನು ಮತಿಭ್ರಮಣೆಗೆ ತುತ್ತಾಗಿದ್ದಾನೆ (ಅಭಿನಯ - ರಾಜೇಶ್ ಖನ್ನಾ). ಅವನನ್ನು ಪ್ರೀತಿಸಿದಂತೆ ನಟಿಸಿ ಅವನ ಮನಸ್ಸಿಗೆ ಚಿಕಿತ್ಸೆ ನೀಡಲು ಒಬ್ಬ ನರ್ಸ್ ಗೊತ್ತುಮಾಡುತ್ತಾರೆ (ಅಭಿನಯ - ವಹೀದಾ ರಹಮಾನ್). ಇವಳನ್ನು ತನ್ನ ಪ್ರೇಮಿಕೆಯೆಂದೇ ನಾಯಕ ಭ್ರಮಿಸುತ್ತಾನೆ. ಈ ಗೀತೆಯಲ್ಲಿ ನಾಯಕನ ಮನಸ್ಸಿನ ಕಳವಳವನ್ನು ಕಾಣಬಹುದು. ಹಿಂದಿನ ಯಾವುದೋ ನೆನಪು ಅವನನ್ನು ಕಾಡುತ್ತಿದೆ. ತಾನು ಪ್ರೇಮಿಸಿದವಳೂ ತನ್ನನ್ನು ಅಷ್ಟೇ ಪ್ರೀತಿಸುತ್ತಾಳೆ ಎಂದು ನಾಯಕ ಭ್ರಮಿಸಿದ್ದಾನೆ. ಆದರೆ ಆಕೆಯ ನಗೆಯಲ್ಲಿ ಅವನಿಗೆ ಏನೋ ವ್ಯಂಗ್ಯದ ಛಾಯೆ ಕಾಣುತ್ತದೆ. ಅವನ ಮನಸ್ಸು ಕುಸಿಯುತ್ತದೆ. ಅಷ್ಟರಲ್ಲಿ ಈಗ ತನ್ನೊಂದಿಗೆ ಇರುವವಳನ್ನು ಕಂಡು ಅವನು ಮತ್ತೆ ಸಾಂತ್ವನ ಹೇಳಿಕೊಳ್ಳುತ್ತಾನೆ - ತನ್ನ ನಾಯಿಕೆ ಇನ್ನೆಲ್ಲೂ ಹೋಗಿಲ್ಲ, ತನ್ನ ಬಳಿಯಲ್ಲೇ ಇದ್ದಾಳೆ! ಅವಳಿನ್ನೂ ತನ್ನನ್ನು ಪ್ರೀತಿಸುತ್ತಾಳೆ ಎಂದು ನಾಯಕ ಸಮಾಧಾನ ಪಟ್ಟುಕೊಳ್ಳುತ್ತಾನೆ. ಕಿಶೋರ್ ಕುಮಾರ್-ಗುಲ್ಜಾರ್-ಹೇಮಂತ್ ಕುಮಾರ್ ಅವರ ಸಂಗಮ ಈ ಗೀತೆಗೆ ವಿಶೇಷ ಮೆರುಗು ತಂದುಕೊಟ್ಟಿದೆ.
ಮೂಲ ಕವಿತೆ - ಗುಲ್ಜಾರ್
ಕನ್ನಡಕ್ಕೆ - ಸಿ ಪಿ ರವಿಕುಮಾರ್
ವಿಲಕ್ಷಣವಾಗಿತ್ತು ಆ ಸಂಜೆ, ಈ ಸಂಜೆಯೂ ಹಾಗೇ ಇದೆ
ನೆನ್ನೆಯೂ ಇದ್ದಳು ಹತ್ತಿರದಲ್ಲೇ, ಇಂದೂ ಇರುವಳು ಸನಿಹದಲ್ಲೇ
ತಗ್ಗಿಸಿದ ಅವಳ ನೋಟದಲ್ಲಿತ್ತು ನನ್ನ ಕುರಿತ ಆಲೋಚನೆ
ಹತ್ತಿಕ್ಕಿದ ಮುಗುಳ್ನಗುವಿನಲ್ಲಿತ್ತು ರಂಗುಗಳ ಆಲಾಪನೆ
ಗುನುಗುತ್ತಿರಬಹುದು ನನ್ನ ಹೆಸರನ್ನೇ ಎಂದು ಗರಿಗೆದರಿತು ಕಲ್ಪನೆ
ಅದೇಕೋ ಅವಳು ಮುಗುಳ್ನಗುತ್ತಿದ್ದಾಳೆಂದು ಅನ್ನಿಸಿತು ಒಮ್ಮೆಲೇ
ತಗ್ಗಿಸಿದ ಅವಳ ನೋಟದಲ್ಲಿದೆ ಇನ್ನೂ ನನ್ನ ಕುರಿತ ಭಾವನೆ
ಹತ್ತಿಕ್ಕಿದ ಮುಗುಳ್ನಗುವಿನಲ್ಲಿದೆ ನನ್ನ ಕುರಿತು ಆಕರ್ಷಣೆ
ನನಗೆ ಗೊತ್ತಿದೆ ಅವಳಿನ್ನೂ ಗುನುಗುತ್ತಿದ್ದಾಳೆ ನನ್ನ ಹೆಸರನ್ನೇ
ನನಗೆ ಗೊತ್ತಿದೆ ನಡೆದು ಬರೆತ್ತಿರುವಳು ನನ್ನ ಹಿಂದೆ!
ಪ್ರತ್ಯುತ್ತರಅಳಿಸಿवो शाम कुछ अजीब थी, ये शाम भी अजीब है
वो कल भी पास पास थी, वो आज भी करीब है
झुकी हुई निगाह में कहीं मेरा ख़याल था
दबी दबी हँसी में इक हसीन सा गुलाल था
मैं सोचता था मेरा नाम गुनगुना रही है वो
न जाने क्यों लगा मुझे के मुस्कुरा रही है वो
मेरा ख़याल है अभी झुकी हुई निगाह में
खिली हुई हँसी भी है दबी हुई सी चाह में
मैं जानता हूँ मेरा नाम गुनगुना रही है वो
यही ख़याल है मुझे के साथ आ रही है वो