ಕಳೆದು ಹೋದ ದಿನಗಳು




ಕಿಶೋರ್ ಕುಮಾರ್ ಅವರು ಹಾಡಿರುವ ಈ ಗ್ತೀತೆಯಲ್ಲಿ ವಿಷಾದದ ಧ್ವನಿ ಇದೆ. ಈ ಗೀತೆಯನ್ನು ಬರೆದವರು ಹಿಂದಿ ಕವಿ ಶೈಲೇಂದ್ರ. ಈ ಪ್ರಶ್ನೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲಾ ಒಂದು ಸಲ ಖಂಡಿತ ಕೇಳಿಕೊಳ್ಳುತ್ತಾರೆ. ಎಲ್ಲಿ ಹೋದವು ನಮ್ಮ ಮಧುರ ದಿನಗಳು? ಬಾಲ್ಯದಲ್ಲಿ ಒಡನಾಡಿಗಳಾಗಿದ್ದವರು ಎಲ್ಲಿ ಹೊರಟುಹೋದರು? ನಿರಾತಂಕದ ಕ್ಷಣಗಳು ಎಲ್ಲಿ ಮಾಯವಾದವು? \ಯಾವುದೋ ಮರೀಚಿಕೆಯನ್ನು ಹುಡುಕುವ ಉತ್ಸಾಹದಲ್ಲಿ ಇದ್ದುದನ್ನೇ ನಾವು ಕಳೆದುಕೊಂಡೆವಲ್ಲ!  ಎಲ್ಲವೂ ದೊರೆತರೂ ಎಲ್ಲವನ್ನೂ ಕಳೆದುಕೊಂಡೆವಲ್ಲ!

ಮೂಲ ಹಿಂದಿ ಗೀತೆ - ಶೈಲೇಂದ್ರ
ಕನ್ನಡ ಅನುವಾದ - ಸಿ ಪಿ ರವಿಕುಮಾರ್

ಮುಗ್ಧ ಮನೋಹರ ದಿನಗಳು, ಕಳೆದುಹೋದ ಆಸರೆಗಳು,
ಅಯ್ಯೋ ಎಲ್ಲಿ ಹೋದವು ಆ ದಿನಗಳು!
ನನ್ನ ಕಣ್ಣ ದೀಪಗಳು, ಒಂಟಿರಾತ್ರಿಗಳ ತಾರೆಗಳು,
ಅಯ್ಯೋ ಎಲ್ಲಿ ಕಳೆದು ಹೋದವು!

ಹಿಂತಿರುಗಿಸಿ ಯಾರಾದರೂ  ನಾನು ಕಳೆದುಹೋದ ದಿನಗಳು!
ಕಳೆದು ಹೋದ ದಿನಗಳು, ಮಧುರ ಮಧುರ ಕ್ಷಣಗಳು!

ನನ್ನ ಕನಸಿನ ಮಹಲು, ನನ್ನ ಸ್ವಪ್ನದ ನಗರ,
ಬಾಳಿನ ಕಹಿ ಸಹಿಸಿದೆ  ಬರಿ  ಇವುಗಳಿಗಾಗಿ!
ಎಲ್ಲಿ ಹುಡುಕಲಿ ಇಂದು? ಎಲ್ಲಿ ಕಳೆದುಕೊಂಡೆ ನಾನು!
ನನ್ನ ಕ್ಷಣಗಳು ನನಗೆ ಕೊಟ್ಟುಬಿಡಿ ಮರಳಿ!

ಒಬ್ಬಂಟಿಯಾಗಿರಲಿಲ್ಲ, ಇದ್ದರು ಜೊತೆಗಾರರು ಎಷ್ಟೋ -
ಇದ್ದುದೆಲ್ಲಾ ಕೊಂಡು ಹೋಯ್ತು ಬಿರುಗಾಳಿ!
ಹಿಂದೊಮ್ಮೆ ಹಾಗಿತ್ತು, ನನ್ನ ಜಗತ್ತು ನನ್ನದೇ ಆಗಿತ್ತು!
ನನ್ನ ಕ್ಷಣಗಳು ನನಗೆ ಕೊಟ್ಟುಬಿಡಿ ಮರಳಿ!

ಕಾಮೆಂಟ್‌ಗಳು


  1. अलबेले दिन प्यारे, मेरे बिछड़े साथ सहारे, हाय कहा गये
    आँखों के उजियारे, मेरी सुनी रात के तारे, हाय कहा गये

    कोई लौटा दे मेरे बीते हुये दिन
    बीते हुए दिन वो मेरे प्यारे पलछीन

    मेरे ख्वाबों के महल, मेरे सपनों के नगर
    पी लिया जिन के लिये, मैने जीवन का जहर
    आज मैं ढूंढू कहा, खो गये जाने किधर
    बीते हुए दिन वो मेरे प्यारे पलछीन

    मैं अकेला तो न था, थे मेरे साथी कई
    एक आँधी सी उठी, जो भी था ले के गयी
    ऐसे भी दिन थे कभी, मेरी दुनियाँ थी मेरी
    बीते हुए दिन वो मेरे प्यारे पलछीन

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)