ಪಾತ್ರಗಳು


ಕಿರ್ದಾರ್ ಅಥವಾ "ಪಾತ್ರಗಳು" ಎಂಬ ಹಿಂದಿ/ಉರ್ದೂ ಕಥೆಗಳನ್ನು ಆಧರಿಸಿದ ದೂರದರ್ಶನ ಕಾರ್ಯಕ್ರಮವನ್ನು ಗುಲ್ಜಾರ್ ನಿರ್ದೇಶಿಸಿದ್ದಾರೆ. ಅಪರೂಪದ ಕಥೆಗಳನ್ನು ಅವರೇ ಆಯ್ದು ಚಿತ್ರಕಥೆ ಸಿದ್ಧಪಡಿಸಿ ನಿರ್ದೇಶಿಸಿದ್ದಾರೆ.  ಯೂ  ಟ್ಯೂಬ್ ಮಾಧ್ಯಮದಲ್ಲಿ ಲಭ್ಯವಾಗಿವೆ. ಈ ಕಾರ್ಯಕ್ರಮದ ಆರಂಭದಲ್ಲಿ ಬಳಸಲಾದ ನಾಲ್ಕು ಸಾಲಿನ ಗೀತೆಯನ್ನು ಬರೆದವರೂ ಗುಲ್ಜಾರ್ ಅವರೇ. ಅದನ್ನು ಮಧುರವಾಗಿ ಹಾಡಿದವರು ಜಗಜೀತ್ ಸಿಂಗ್. ಈ ಹಾಡು ಮತ್ತೆ ಮತ್ತೆ ಮೆಲಕುಹಾಕುವಂತಿದೆ. 


ಮೂಲ ಹಿಂದಿ - ಗುಲ್ಜಾರ್ 
ಕನ್ನಡಕ್ಕೆ - ಸಿ ಪಿ  ರವಿಕುಮಾರ್ 

ಹಾದುಬರುವಾಗ  ಹಳೆಯ ಹೊತ್ತಿಗೆಗಳ ಮೂಲಕ  
ಎದುರಾಗುತ್ತವೆ  ಒಮ್ಮೆಲೇ ಪಾತ್ರಗಳು ಕೆಲವು
ಮುಖಾಮುಖಿಯಾಗುತ್ತಾರೆ ಕೈಬೀಸುತ್ತಾ 
ಗತಕಾಲದ ಹೊಸ್ತಿಲಲ್ಲಿ ನಿಂತಿರುವ ಮಿತ್ರರು 

ತೊರೆದು ಬಂದಿದ್ದೆವಲ್ಲ ಹೃದಯದ ಬಂಜರು ನೆಲವೆಂದು
ಅದೇ ಜಾಗದಲ್ಲಿ ಇಂದು 
ಪಾಳುನಗರದ ನಡುವೆ ಗೋಚರಿಸುತ್ತವೆ  
ಆಸರೆ ನೀಡುವ ಬಳ್ಳಿ ಒಂದೊಂದು 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)