ಭಜಿಸೋ ಮನುಜ, ರಾಮ ಗೋವಿಂದ ಹರಿ
ಮೂಲ - ಸಂತ ಕಬೀರ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಭಜಿಸು ಮನುಜ, ರಾಮ ಗೋವಿಂದ ಹರಿ
ಜಪ ತಪ ಸಾಧನ ಏನೂ ಬೇಡದು, ಬೇಡದು ನಿನ್ನ ಸಿರಿ
ಸಂತತಿ ಸಂಪದ ಲೋಲುಪನಾಗಿ ಮರೆತು ಹೋದೆ ಗುರಿ
ಭಜಿಸು ಮನುಜ, ರಾಮ ಗೋವಿಂದ ಹರಿ
ಜಪ ತಪ ಸಾಧನ ಏನೂ ಬೇಡದು, ಬೇಡದು ನಿನ್ನ ಸಿರಿ
ಸಂತತಿ ಸಂಪದ ಲೋಲುಪನಾಗಿ ಮರೆತು ಹೋದೆ ಗುರಿ
ಸ್ಮರಿಸು ರಾಮನನ್ನು ಬರುವ ಮುನ್ನ ಮೃತ್ಯು ಹಾರಿ
ಕೇಳಿ ಹೇಳುತಿಹನು ಸಂತ ಕಬೀರ ಸಾರಿ ಸಾರಿ
ರಾಮನಾಮ ಹೇಳದ ನಾಲಗೆಗೆ ಮಣ್ಣುಧೂಳೆ ದಾರಿ
ಕೇಳಿ ಹೇಳುತಿಹನು ಸಂತ ಕಬೀರ ಸಾರಿ ಸಾರಿ
ರಾಮನಾಮ ಹೇಳದ ನಾಲಗೆಗೆ ಮಣ್ಣುಧೂಳೆ ದಾರಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ