ಅವರಂತೆ

ಮೂಲ: ಜೆನ್ನಿ ಆಸ್ಬಾರ್ನ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್ 


ಇದೆ ನನ್ನಾತ್ಮದ ಒಳಗೆ ಎಲ್ಲೋ ಒಂದು ಕಡೆ
ನಾನು ತುಂಬಲಾರದ ಖಾಲೀ ಸ್ಥಳವೊಂದು
ಕಿಟಕಿ ಪಕ್ಕದಲ್ಲಿಟ್ಟ ಖಾಲಿ ಹೂದಾನಿಯ ಹಾಗೆ
ಸುಂದರ, ಆದರೆ ತುಂಬಲಾಗದು ಅಲ್ಲಿ ಹೂವನೆಂದೂ

ನಾನು ಕಾಯುತ್ತೇನೆ ಕುಳಿತಲ್ಲೇ ಗಮನಿಸುತ್ತಾ
ಹಾದುಹೋಗುವ ಪ್ರತಿಯೊಬ್ಬರ ತೂಕ
ನನ್ನ ಮನದಲ್ಲಿದೆ ಅವರನ್ನು ಸೇರಿಕೊಳ್ಳುವ ಆಸೆ
ತಡೆಯುವುದು ಅವರಂತೆ ಆಗಿಬಿಡುವ ಆತಂಕ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)