ಹಕ್ಕುಗಳು

 ಹಕ್ಕುಗಳು 


ಮೂಲ: ನಿಕ್ಕಿ ಜಿಯೋವನಿ

ಕನ್ನಡಕ್ಕೆ: ಸಿ ಪಿ ರವಿಕುಮಾರ್


ನಾನೊಂದು ಜೇಡವನ್ನು ಕೊಂದುಹಾಕಿದೆ.
ಅದೇನೂ ಕಂದುಬಣ್ಣದ ವಿಷಮಯ ಜೇಡವಾಗಿರಲಿಲ್ಲ
ಅಥವಾ ಕಪ್ಪು ಬಣ್ಣದ ಬ್ಲಾಕ್ ವಿಡೋ ಕೂಡಾ ಆಗಿರಲಿಲ್ಲ.
ನಿಜ ಹೇಳಬೇಕೆಂದರೆ ಅದೊಂದು 
ಯಕಶ್ಚಿತ್ 
ಕಾಗದದಂಥ ಜೇಡವಾಗಿತ್ತು.
ನಾನು ಕೈಯಲ್ಲಿ ಪುಸ್ತಕ ಎತ್ತಿಕೊಂಡಾಗ
ಅದು ಓಡಿಹೋಗಬೇಕಾಗಿತ್ತು.
ಹಾಗೆ ಅವಳು ಓಡಲಿಲ್ಲ 
ಹೀಗಾಗಿ ನನಗೆ ಗಾಬರಿಯಾಗಿ
ಅವಳನ್ನು ಅಪ್ಪಚ್ಚಿ ಮಾಡಿದೆ.

ನನಗೆ ಭಯವಾಯ್ತೆಂದು

ಜೀವಿಯೊಂದನ್ನು ಹೊಸಕಿ ಹಾಕುವ ಹಕ್ಕು

ನನಗಿಲ್ಲ ಎಂದು ತೋರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ