ಶೋಧ

 ಶೋಧ 
ಮೂಲ: ವ್ಯಾಲೆರಿ  ವೇಟ್ 
ಕನ್ನಡಕ್ಕೆ: ಸಿ ಪಿ ರವಿಕುಮಾರ್



ಕಾಣೆಯಾದಳು ಅಜ್ಜಿ ಕಂಪ್ಯೂಟರ್ ಒಳಗೆ
ಸುಳ್ಳು ಹೇಳುತ್ತೇನಾ ನಿಜವಾಗಿ, ನನ್ನಾಣೆ,
ಕಂಟ್ರೋಲ್ ಎಂಟರ್ ಒತ್ತಿದಳು ನೋಡಿ
ಒಮ್ಮೆಲೇ ಕಣ್ನೋಟಕ್ಕೆ ಆಗಿಬಿಟ್ಟಳು ಕಾಣೆ
ನುಂಗಿಬಿಟ್ಟಿತು ಇಡಿಇಡಿಯಾಗಿ ಸಂಪೂರ್ಣ
ನೆನೆಸಿಕೊಂಡರೆ ಈಗಲೂ ಮೈಯಲ್ಲಿ ನಡುಕ
ಅಂಟಿಕೊಂಡಿರಬಹುದು ಒಳಗಿರುವ ವೈರಸ್
ಅಥವಾ ವರ್ಮ್ ಯಾವುದಾದರು, ಕೆಡುಕ
ಹುಡುಕಿ ನೋಡಿದೆ ರೀಸೈಕಲ್ ಬಿನ್ ಒಳಗೆ
ಮತ್ತು ಜಾಲಾಡಿದೆ ಎಲ್ಲಾ ಬಗೆಯ ಕಡತ
ಇಂಟರ್ ನೆಟ್ ಕೂಡಾ ಬಳಸಿ ನೋಡಿದ್ದೇನೆ
ಕಣ್ಣಿಗೆ ಬೀಳಲಿಲ್ಲ, ಬರೀ ನಿರರ್ಥಕ ದುಡಿತ.
ವಿಹ್ವಲ ಸ್ಥಿತಿಯಲ್ಲಿ ನೆನಪಾದನು ಜೀವ್ಸ್ 
ಇಮೇಲ್ ಕಳಿಸಿದೆ ತಕ್ಷಣ : ಹೇಳು ಮಹರಾಯ
ಹೇಗೆ ಶೋಧಿಸಿದರೆ ಸಿಕ್ಕಬಹುದೆಂದು ಆದರೆ
ಅವನೂ ತಲೆ ಕೊಡವಿದನು, ಏನು ಅನ್ಯಾಯ
ಆನ್ಲೈನ್ ಎಲ್ಲೂ ಕಾಣುತ್ತಿಲ್ಲವೆ? ಹಾಗಾದರೆ 
ನೋಡು ಇನ್ ಬಾಕ್ಸ್ ಒಳಗೆ ಇರುವಳೇ ಅಜ್ಜಿ
ಕಂಡರೆ ಕಂಟ್ರೋಲ್ ಸಿ ಕಂಟ್ರೋಲ್ ವಿ ಮಾಡಿ 
ಕಳಿಸಿಬಿಡು ಮಾರೋಲೆ  ಆಟಾಚ್ಮೆಂಟ್ ಹಚ್ಚಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ