ಬೆರಳೆಣಿಕೆಯಷ್ಟು

 ಬೆರಳೆಣಿಕೆಯಷ್ಟು

ಮೂಲ: ಎಡ್ಗರ್ ಆಲ್ಬರ್ಟ್ ಗೆಸ್ಟ್ 

ಕನ್ನಡ ಅನುವಾದ : ಸಿ ಪಿ ರವಿಕುಮಾರ್ 



ಕಿಕ್ಕಿರಿದಿವೆ ಸುಲಭಮಾರ್ಗಗಳೆಲ್ಲ
ಸಾಫಾದ ದಾರಿಗಳು ಜನನಿಬಿಡವಾಗಿವೆ
ಆಳವಿಲ್ಲದ ಸಣ್ಣಪುಟ್ಟತೊರೆಗಳೆಲ್ಲ 
ಕೊಡಮಡಕೆಕುಡಿಕೆ ತುಂಬಿ ಬಡವಾಗಿವೆ 
ದೂರದಲ್ಲಿದೆಯಲ್ಲ ಕಲ್ಲು ಬಂಡೆಯದಾರಿ
ಏರಿದರೆ ಕಾಣುವುದಲ್ಲ ದೂರದೂರದ ನೋಟ
ಅಲ್ಲಿ ಹೋಗುವ ಜನರು ಬೆರಳೆಣಿಕೆಯಷ್ಟು 
ಸಿಕ್ಕಲಾರದು ದಾರಿ ಶೋಧಿಸಿದರೂ ಭೂಪಟ.

ಸುಗಮವಾಗಿದೆಯೋ ಎಲ್ಲಿ ನಡೆಯುವ ದಾರಿ
ಅಲ್ಲಿಗೇ ಮುಗಿಬೀಳುವುದು ಜನತೆ
ಸುಲಭ ಒಬ್ಬರ ಹಿಂದಿನ್ನೊಬ್ಬರು  ಸಾಗುವುದು
ಜನಪ್ರಿಯ ಹಾದಿಗೆ ಇನ್ನಷ್ಟು ಜನಪ್ರಿಯತೆ.
ದಾರಿ ದುರ್ಗಮ ಅಲ್ಲಿ ಹೆಜ್ಜೆ ಇಡಲೂ ಧೈರ್ಯ
ಬೇಕೋ ಮಾಡಲು ಕಷ್ಟವೋ ಯಾವ ಕಾರ್ಯ
ಪೂರೈಸಿದಾಗ ಅದುವೇ ತಂದುಕೊಡುವುದು ಕೀರ್ತಿ
ಯಾರಿಗಿದೆಯೋ ಹಿಂಜರಿಯದೆ ಮುನ್ನಡೆವ ಸ್ಥೈರ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)