ಹೆಚ್ಚು ಪ್ರೀತಿಸುವ ವ್ಯಕ್ತಿ
ಮೂಲ: ಡಬ್ಲ್ಯು ಎಚ್ ಆಡೆನ್
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಕತ್ತೆತ್ತಿ ನೋಡುವಾಗ ನಕ್ಷತ್ರಗಳತ್ತ ನನಗೆ ಒಳಗೊಳಗೇ ಗೊತ್ತು
ಅವಕ್ಕೇನೂ ದರದಿಲ್ಲ ನಾನು ನರಕಕ್ಕೆ ಹೋದರೂ ಸತ್ತು
ಭೂಮಿಯ ಮೇಲೆ ಹಾಗಲ್ಲ, ಉಪೇಕ್ಷೆಯು ಅಲ್ಲವೇ ಅಲ್ಲ
ಮನುಷ್ಯ ಅಥವಾ ಮೃಗಗಳಿಂದ ನಮಗೆ ಸಿಕ್ಕಬಲ್ಲ ಅತ್ಯಂತ ಕೆಟ್ಟ ವಸ್ತು
ಅವಕ್ಕೇನೂ ದರದಿಲ್ಲ ನಾನು ನರಕಕ್ಕೆ ಹೋದರೂ ಸತ್ತು
ಭೂಮಿಯ ಮೇಲೆ ಹಾಗಲ್ಲ, ಉಪೇಕ್ಷೆಯು ಅಲ್ಲವೇ ಅಲ್ಲ
ಮನುಷ್ಯ ಅಥವಾ ಮೃಗಗಳಿಂದ ನಮಗೆ ಸಿಕ್ಕಬಲ್ಲ ಅತ್ಯಂತ ಕೆಟ್ಟ ವಸ್ತು
ಹೇಗಿರುತ್ತಿತ್ತು ನಮ್ಮಲ್ಲಿ ಅನುರಕ್ತಗೊಂಡು ಸುಡುತ್ತಿದ್ದರೆ ನಕ್ಷತ್ರ?
ಅವುಗಳ ಭಾವತೀವ್ರತೆಗೆ ಸಮವಾಗಿ ಸ್ಪಂದಿಸಲು ನಮಗೆ ಆಗತ್ತಾ?
ಪ್ರೀತಿಯ ತಕ್ಕಡಿಯು ಸಮವಾಗಿಲ್ಲದೇ ಇದ್ದ ಪಕ್ಷ
ನಾನೇ ವಾಲುವುದು ಮೇಲು ಹೆಚ್ಚು ಪ್ರೀತಿಸುವತ್ತ
ತಾರೆಗಳ ಅಭಿಮಾನಿ ನಾನೆಂಬುದು ನಿಜವೇ ಆದರೂ
ನನಗಾಗಿ ಕ್ಯಾರೇ ಅನ್ನುವುದಿಲ್ಲ ಅವುಗಳಲ್ಲಿ ಯಾರೂ
ಈಗ ಅವುಗಳ ಕಡೆಗೆ ನೋಡುತ್ತಾ ಮನದಟ್ಟಾಗುತ್ತಿದೆ ನನಗೂ
ಬೆಳಗಿಂದ ಅಷ್ಟೇನೂ ಕಾಡಿಲ್ಲ ಅವುಗಳ ಅನುಪಸ್ಥಿತಿ ನನ್ನನ್ನು.
ತಾರೆಗಳೆಲ್ಲಾ ಒಣಗಿ ಉದುರಿಹೋದರೆ ಒಂದು ಪಕ್ಷ
ಕಲಿಯಬಲ್ಲೆ ನೋಡುತ್ತಾ ನಿಲ್ಲುವುದು ಶೂನ್ಯ ಅಂತರಿಕ್ಷ
ಅನುಭವಿಸಲು ಕಲಿಯಬಲ್ಲೆ ಅದರ ಭವ್ಯ ಅಂಧಕಾರ
ಸ್ವಲ್ಪ ಕಷ್ಟವಾದೀತು, ಆದರೂ ಕಲಿಯಬಲ್ಲೆ, ಖಚಿತ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ