ಚಿನ್ನ

 ಚಿನ್ನ
ಮೂಲ: ರಾಬರ್ಟ್ ಫ್ರಾಸ್ಟ್




ಕನ್ನಡ ಅನುವಾದ: ಸಿ ಪಿ ರವಿಕುಮಾರ್
ನಿಸರ್ಗದ ಮೊದಲ ಹಸಿರು ಹೊಂಬಣ್ಣದ್ದು,
ಹಿಡಿದಿಡಲು ಅವಳಿಗೆ ಅತ್ಯಂತ ಕಷ್ಟದ ಬಣ್ಣ.
ಅವಳ ಮೊದಲ ಚಿಗುರೆಲೆಯೊಂದು ಪುಷ್ಪ,
ಆದರೆ ಒಂದು ಗಂಟೆಯ ಕಾಲ ಮಾತ್ರ.
ಅನಂತರ ಎಲೆಯು ಎಲೆಯಾಗಿಬಿಡುವುದು
ಹಾಗೇ ಈಡನ್ ದುಃಖದಲ್ಲಿ ಮುಳುಗುವುದು
ಹಾಗೇ ನಸುಕು ದಿವಸದಲ್ಲಿ ಕರಗುವುದು
ಚಿನ್ನದ ಯಾವುದೂ ಸದಾ ಚಿನ್ನವಾಗಿರದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)