ತುದಿಗಾಲಿನ ಮೇಲೆ ನಿಂತವನು

 





ತುದಿಗಾಲಿನ ಮೇಲೆ ನಿಂತವನು
ಭದ್ರವಾಗಿ ನಿಲ್ಲಲಾರ
ರಭಸದಲ್ಲಿ ಮುನ್ನುಗ್ಗುವವನು 
ಹೋಗಲಾರ ಹೆಚ್ಚು ದೂರ
ಮಂದಗೊಳಿಸುವನು ತನ್ನದೇ ಪ್ರಭೆಯನ್ನು 
ಹೊಳೆಯಲು ಪ್ರಯತ್ನಿಸಿದವನು
ತನ್ನ ನೈಜ ಸ್ವರೂಪವನ್ನು ಅರಿಯಲಾರ 
ತನ್ನನ್ನೇ ಬಣ್ಣಿಸುವವನು
ಪರರ ಮೇಲೆ ಅಧಿಕಾರ ಹೊಂದಿದವನು
ತನ್ನ ಮೇಲೆ ನಿಯಂತ್ರಣ ಸಾಧಿಸಲಾರ
ತನ್ನ ಕೆಲಸಕ್ಕೆ ಸದಾ ಅಂಟಿಕೊಂಡವನು
ಬಾಳಬಲ್ಲ ಏನನ್ನೂ ಸೃಷ್ಟಿಸಲಾರ
ಡಾವೋದೊಂದಿಗೆ ಸಾಧಿಸಬೇಕೆಂದರೆ ಸಾಮರಸ್ಯ
ಸುಮ್ಮನೆ ನಿನ್ನ ಕೆಲಸ ಮಾಡಿ ಬಿಟ್ಟುಬಿಡೋ ಮನುಷ್ಯ.


ಮೂಲ: ಲಾವೋ ತ್ಸು 
ಅನುವಾದ: ಸಿ ಪಿ ರವಿಕುಮಾರ್



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)