ಕಾಫಿ ಬಂತು ಕಾಫಿ

ಮೂಲ: ಈ ಎಲ್ ಸಿಲ್ವೆಸ್ಟರ್

ಅನುವಾದ: ಸಿ ಪಿ ರವಿಕುಮಾರ್



ಪರಿಮಳ ತರುವಳು ಕಾಫಿಯ ಕಿತ್ತಲಿ, ಹೊಮ್ಮುವ ಬಿಸಿಬಿಸಿ ಕಾಫಿ ಹೊಗೆ!
ತರುವಳು ಹರಿಣಿ ಹಾಲಿನ ಗಿಂಡಿ, ನಗುತಿದೆ ನೊರೆಹಾಲು ಮುಗುಳುನಗೆ!
ಗಾಜಿನ ಬಟ್ಟಲು ತಂದಳು ಕಮಲಾ ನೋಡಿರಿ ಕಿಣಿ ಕಿಣಿ ಎನಿಸುತ್ತಾ!
ಫಳ ಫಳ ಹೊಳೆಯುವ ಚಮಚದ ಗೊಂಚಲು ತಂದಳು ನೋಡಿ ಚಾರುಲತಾ!
ಎಲ್ಲರಿಗಿಂತ ಕೊನೆಗೆ ಬಂದಿತು ನಮ್ಮ ಪುಟ್ಟಿ ತೂರಾಡುತ್ತಾ
ಸಿಹಿಯಲ್ಲವೇ  ನೀನೆಲ್ಲರಿಗಿಂತ, ಸಕ್ಕರೆ ತಂದೆಯಾ, ಬಾ ಪುಟ್ಟಾ !

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)