ಬರವಣಿಗೆ

 ಮೂಲ: ಕ್ರಿಸ್ಟೊಫರ್ ಸೆಕ್ಸ್ಟನ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್


ಬರವಣಿಗೆ ಎಂದರೆ ಸಾಮಾನ್ಯವೆಂದು ತಿಳಿಯದಿರಿ
ಅದು ಚರ್ಮವನ್ನು ಸ್ಪರ್ಶಿಸದೇ ಅಪರಿಚಿತನ
ಆತ್ಮವನ್ನು ಚುಂಬಿಸುವ ಪರಿ,
ಎಂದೂ ಸಂಧಿಸದ ಹೃದಯಗಳ ಮೇಲೆ
ಹೆಜ್ಜೆ ಗುರುತುಗಳನ್ನು ಮೂಡಿಸುವ ಕಲೆ,
ಜಗತ್ತಿನ ಬಿರುಕುಗಳಲ್ಲಿ ಇಣುಕಿ 
"ನೀನು ಒಬ್ಬಂಟಿಯಲ್ಲ" ಎಂದು ಪಿಸುಗುಟ್ಟು
ಎಲ್ಲೋ ಯಾರೋ ಒಬ್ಬರು ಅದರ ಪ್ರತಿಧ್ವನಿ
ಕೇಳಿಸಿಕೊಳ್ಳುವರೆಂಬ ವಿಶ್ವಾಸ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)