ಗಡಿಯಾರದವನು

 ಗಡಿಯಾರದವನು



ಮೂಲ: ಶೆಲ್ ಸಿಲ್ವರ್ಸ್ಟೀನ್

ಅನುವಾದ: ಸಿ ಪಿ ರವಿಕುಮಾರ್


ಕೇಳಿದನು ಮಗುವನ್ನು ಗಡಿಯಾರದವನು,
ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ?
"ಕೊಡುವುದಿಲ್ಲ ಒಂದೂ ಕಾಸು!" ಉತ್ತರಿಸಿತು ಮಗು
"ಮುಗುಳ್ನಗುಗಳಿದ್ದಷ್ಟು ನನ್ನಲ್ಲಿ ದಿನಗಳಿವೆ!"

ಮಗು ಯುವಕನಾದಾಗ ಗಡಿಯಾರದವ ಕೇಳಿದನು,
ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ?
"ಒಂದು ರೂಪಾಯಿ ಕೊಡಬಲ್ಲೆ, ಹೆಚ್ಚೆಂದರೆ ಎರಡು!
ಏಕೆಂದರೆ ನನ್ನವೇ ಬೇಕಾದಷ್ಟು ದಿನಗಳಿವೆ!"

ಸಾಯುವ ಘಳಿಗೆಯಲ್ಲಿ ಗಡಿಯಾರದವ ಕೇಳಿದನು,
ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ?
"ಸಪ್ತಸಾಗರದ ಎಲ್ಲಾ ಮುತ್ತುಗಳನ್ನೂ ಕೊಟ್ಟು
ಕೊಡುವೆ ಆಗಸದಲ್ಲಿರುವ ಸಕಲ ತಾರೆ."

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)