ಏಕಾಂಗಿನಿ ಭೂಮಿ
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್, ಇರಾಕ್)
ಕನ್ನಡಕ್ಕೆ ... ಸಿಪಿರವಿಕುಮಾರ್
(ಕವಿತೆಯ ಸ್ವಾರಸ್ಯ: ಇರಾಕ್ ಅನೇಕ ರಾಷ್ಟ್ರಗಳಿಂದ ಬಹಿಷ್ಕೃತವಾದ ದೇಶ. "ಶ್ವೇತಕಾಯ" ಎನ್ನುವುದು ಇಲ್ಲಿ ಯಾವ ಅರ್ಥ ಹೊಮ್ಮಿಸುತ್ತಿದೆ ಎಂದು ಯೋಚಿಸಿ. ಇದೇ ರೀತಿ "ತಾರೆ" ಎನ್ನುವ ಪದದಲ್ಲೂ ನಿಮಗೆ ವಿಶಿಷ್ಟ ಅರ್ಥ ಗೋಚರಿಸಬಹುದು. ತಮ್ಮ ದೇಶದ ವಿರುದ್ಧ ಎಷ್ಟೆಲ್ಲಾ ನಿಂದನೆ/ಬಹಿಷ್ಕಾರಗಳು ಇದ್ದರೂ ದೇಶದ ಜನರಿಗೆ ತಾಯಿನಾಡನ್ನು ಕುರಿತು ಅಭಿಮಾನ ಇದ್ದೇ ಇರುತ್ತದೆ. ತಮ್ಮ ತಾಯಿನಾಡು ಏಕಾಂಗಿನಿ ಕನ್ಯೆಯಂತೆ ಕವಯಿತ್ರಿಗೆ ಕಾಣುತ್ತಾಳೆ. ಎಲ್ಲ ಕಿರಣಗಳನ್ನೂ ತಾನೇ ಕದಿಯುವ ಸೂರ್ಯ ಚಂದ್ರನ ಮೂಲಕ ಒಂದಿಷ್ಟು ಬೆಳಕನ್ನು ದಯಪಾಲಿಸುವುದು ಏನನ್ನು ಸೂಚಿಸುತ್ತದೆ?)
ವಿಶ್ವದ ಒಂದಾದರೂ ಶ್ವೇತಕಾಯ
ಅವಳಿಗೆ ಆನ್ನುವುದಿಲ್ಲ ಕ್ಯಾರೇ.
ನಕ್ಕು ಮಾತಾಡಿಸುವುದಿಲ್ಲ ಒಂದಾದರೂ ತಾರೆ.
ಅದೆಷ್ಟೋ ಗುಲಾಬಿ
ಅದೆಷ್ಟೋ ಸುಂದರ ಭಾವನೆ
ದಫನವಾಗಿದ್ದರೂ ಹಾತೊರೆಯುತ್ತಾಳೆ
ಒಂದು ನೋಟಕ್ಕಾಗಿ,
ಒಂದು ಗಂಧಕ್ಕಾಗಿ.
ಏಕಾಂಗಿನಿಯಾಗಿದ್ದಾಳೆ
ಧೂಳಿನ ಗೋಳವಾಗಿದ್ದಾಳೆ ವಸುಂಧರೆ.
ಚಂದ್ರನ ತೇಪೆ ಹಾಕಿದ ಅಂಗಿ ನೋಡಿ
ಅವಳಿಗೆ ತಿಳಿಯುತ್ತದೆ ಸೂರ್ಯನ ವಂಚನೆ.
ಎಲ್ಲ ಕಿರಣಗಳನ್ನೂ ತಾನೇ ಕದ್ದು
ತಮ್ಮನ್ನು ಬಾಡಿಗೆದಾರರಂತೆ ಕಾಣುತ್ತಾನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ