ಬಂದದ್ದೇನು ನನ್ನ ಪಾಲಿಗೆ? (ಅನುವಾದಿತ ಕವಿತೆ)

ಬಂದದ್ದೇನು ನನ್ನ ಪಾಲಿಗೆ?

ಎಲ್ಲಿ ಮಾಡಬೇಕಿತ್ತೋ ಸೀಯಾಳದಿಂದ ನೀರಾವರಿ
ಅಲ್ಲಿ ಉಪ್ಪುನೀರಿನ ಹೊರತು ಬೇರೇನಿಲ್ಲ ರಹದಾರಿ
ಏನೂ ಬೆಳೆಯದ ಜೀವನಹೊಲದಿಂದೇಕೆ
ವಿಧಿ ತುಂಬಿತು ಈ ಬಾಳ ಜೋಳಿಗೆ?
ಬಂದದ್ದೇನೆನ್ನ ಪಾಲಿಗೆ?

ಕಣ್ಣೀರಿನಿಂದ ತೊಯ್ಯಿಸಿದರೂ ಹೊಲದಲ್ಲಿ
ಬೆಳೆಯದಲ್ಲ ಫಲ ನೀಡುವ ಬಳ್ಳಿ
ಸೃಷ್ಟಿಯ ಯಾವ ಗೂಢಾರ್ಥ ಅಡಗಿಹುದು
ವ್ಯರ್ಥ ಪುನಃ ಪ್ರಯತ್ನದೊಳಗೆ?
ಬಂದದ್ದೇನೇನ್ನ ಪಾಲಿಗೆ?

ಮುರಿದುಹೋಗುತ್ತವೆ ಮಧುಮಾಸಗಳು ಏಕೆ
ಕಾಲಿಡುವ ಮೊದಲೇ ಮಧುವನದ ಒಳಗೆ?
ನಾಳೆಯ  ಪೂರ್ವ ಸಿದ್ಧತೆಯಲ್ಲೆ
ಕರಗಿಹೋಗುತ್ತಿರುವ ಬಾಳಿಗೆ
ಬಂದದ್ದೇನೆನ್ನ ಪಾಲಿಗೆ?

ಮೂಲ: ಹರಿವಂಶ ರಾಯ್ ಬಚ್ಚನ್
ಅನುವಾದ: ಸಿ. ಪಿ. ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)