ಬೇಸಗೆಯಲ್ಲಿ ನಿದ್ದೆ

 ಮೂಲ - ರಾಬರ್ಟ್ ಲೂಯಿ ಸ್ಟೀವನ್ ಸನ್

ಕನ್ನಡಕ್ಕೆ - ಸಿ. ಪಿ. ರವಿಕುಮಾರ್



ಚಳಿಗಾಲದಲ್ಲೋ ಕತ್ತಲಲ್ಲೇ ಎದ್ದು ಮೋಂಬತ್ತಿಯ
ಹಳದಿ ಬೆಳಕಲ್ಲಿ ಹಾಕಿಕೊಳ್ಳಬೇಕು ಬಟ್ಟೆ!
ಬೇಸಗೆಯಲ್ಲಿ ಇದೆಲ್ಲಾ  ತಳಕಂಪಳಕ
ಬೆಳಕಿದ್ದಾಗಲೇ ಮಾಡಬೇಕಂತೆ ನಿದ್ದೆ!

ಅಡ್ಡಾದರೆ ಕಾಣುವುದು ಕಿಟಕಿಯಿಂದಾಚೆಗೆ
ಕುಪ್ಪಳಿಸುತ್ತಾ ಹಕ್ಕಿಗಳು ಮಾಡುವುದು ಕಲಕಲ
ಹೊರಗೆ ಬೀದಿಗಳಿಂದ ಕೇಳುತ್ತದೆ ದೊಡ್ಡವರು
ಓಡಾಡುವಾಗ ಪಾದರಕ್ಷೆಗಳ ಸಪ್ಪಳ

ಹೇಳಿ ನಿಮಗಿದು ಕಷ್ಟ ಅನ್ನಿಸುವುದಿಲ್ಲವೇ,
ಹೊರಗೆ ಹೊಳೆಯುತ್ತಿರುವಾಗ ನೀಲಿ ಆಕಾಶ, ಮತ್ತೆ
ನನಗೆ ಇನ್ನೂ ಆಟವಾಡುವ ಮನಸ್ಸಿರುವಾಗ,
ಹೋಗು ಮಲಗಿಕೋ ಎಂಬ ಕಠಿಣಶಿಕ್ಷೆ?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)