ನಿನ್ನನ್ನು ಒಮ್ಮೆ ಪ್ರೀತಿಸುತ್ತಿದ್ದೆ

ಮೂಲ: ಅಲೆಕ್ಸಾಂಡರ್ ಪುಷ್ಕಿನ್

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ನಿನ್ನನ್ನು ಒಮ್ಮೆ ಪ್ರೀತಿಸುತ್ತಿದ್ದೆ. ಆರಿಲ್ಲ

ಅದರ ಕಿಚ್ಚು ನನ್ನ ಹೃದಯದಲ್ಲಿ ಇನ್ನೂ.

ಮಂದವಾಗಿ ಉರಿಯುತ್ತಿದೆ ಈಗ ನಂದಾದೀಪದಂತೆ

ನಿನಗೆ ನೀಡದು ಯಾವ ಪೀಡೆಯನ್ನೂ.


ಹತಾಶೆಯಿತ್ತು ನಿನ್ನ ಕುರಿತು ನನ್ನ ಮೂಕ ಪ್ರೀತಿಯಲ್ಲಿ

ಕೆಲವೊಮ್ಮೆ ಅತಿ ಸಂಕೋಚ, ಕೆಲವೊಮ್ಮೆ ಭುಗಿಲೆದ್ದ ಈರ್ಷೆ.

ದೇವರು ಕರುಣಿಸಲಿ ನಿನಗೆ ಬೇರೊಬ್ಬರನ್ನು ಯಾರು 

ಪ್ರೀತಿಸುವರೋ ನಿಜವಾಗಿ, ಕೋಮಲವಾಗಿ ನನ್ನಂತೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)