ಸಾಮಾನ್ಯರು

 ಮೂಲ: ರಾಬರ್ಟ್ ಸರ್ವಿಸ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ನಾವು ಬಂದರೂ ಒಬ್ಬರೆದುರಿಗೆ ಒಬ್ಬರು
ನೀನು ಮಾಡುವುದಿಲ್ಲ ನಮಸ್ತೆ
ನಾನು ಬಂದರೂ  ನಿನ್ನ ಎದುರಿಗೆ
ಹಿಡಿದು ಹೋಗಿಬಿಡುವೆ ನಿನ್ನ ರಸ್ತೆ
ಕಣ್ಣೆತ್ತಿಯೂ ನೋಡುವುದಿಲ್ಲ ನನ್ನ ಕಡೆ
ಕನಿಷ್ಠ ನಾಮಕೇವಾಸ್ತೆ
ಏಕೆಂದರೆ ನಾನೊಬ್ಬ ಸಾಧಾರಣ ಸಾಮಾನ್ಯ ಮನುಷ್ಯ.

ಯಾರಿಗೆ ಗೊತ್ತು ನೀನೂ ಕೂಡಾ
ಆಗಿರಬಹುದು ಸಾಮಾನ್ಯ ಮನುಷ್ಯನೇ!
ಹೇಳಿದ ಕೆಲಸ ಮಾಡಿಕೊಂಡು ತೆಪ್ಪಗೆ,
ಸಂಬಳ ಹೆಂಡತಿಯ ಕೈಗೆ ಕೊಡುವೆ ತಾನೇ!
ಮನೆ, ಮಕ್ಕಳು, ಮರಿ ಎನ್ನುತ್ತಾ
ಲೇಖನಿಯನ್ನೋ ಪಿಕಾಸಿಯನ್ನೋ 
ಎತ್ತಿಕೊಳ್ಳುವೆಯಲ್ಲವೆ ಕೈಗೆ?
ಚಿಂತಿಸದಿರು ಗೆಳೆಯಾ ನಾವಿಬ್ಬರೂ
ಸಾಧಾರಣ ಸಾಮಾನ್ಯ ಮನುಷ್ಯರು!

ದುಡಿಯುತ್ತೇವೆ ತುಟಿ ಪಿಟುಕಿಸದೆ, ರಗಳೆ ಮಾಡದೆ,
ನಮ್ಮ ಸಾಧನೆಗೆ ಯಾವುದೇ ಬಹುಮಾನವಿಲ್ಲ
ಇಷ್ಟಾದರೂ ನಮ್ಮಂಥ ಸಾಮಾನ್ಯರಿಂದಲೇ
ನಡೆಯುತ್ತಿದೆ ಜಗತ್ತು, ಅನುಮಾನವಿಲ್ಲ.
ಇಡುತ್ತೇವೆ ನಾವು ದೃಢವಾದ ಹೆಜ್ಜೆ
ದೇವರು  ಬರೆದಿರುವ ಗೆರೆ ಅನುಸರಿಸಿ
ಸರ್ವಶಕ್ತರು ನಾವು, ನಮ್ಮ ಶಕ್ತಿಗೆ ಎಲ್ಲರೂ
ಮುಗಿಯಲೇ ಬೇಕು ಕೈ ಜೋಡಿಸಿ 
ನಾವು ಸಾಧಾರಣ ಸಾಮಾನ್ಯ ಮನುಷ್ಯರು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)