ಸಿ ಪಿ ರವಿಕುಮಾರ್ - ಕನ್ನಡ ಬರಹಗಳು
ನನ್ನ ಇತರ ಬ್ಲಾಗ್ ಬರಹಗಳನ್ನೂ ನೋಡಿ -
http://cp-ravikumar-kannadapoems2english.blogspot.com/
http://cp-ravikumar-english.blogspot.com/
http://cpravikumar-hindi.blogspot.com/
http://seepisampada.blogspot.com/
ಸಿ ಪಿ ರವಿಕುಮಾರ್ "ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ! ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು. ಸತ್ತಂತಿಹರನು ಬಡಿದೆಚ್ಚರಿಸು! ಕಚ್ಚಾಡುವರನು ಕೂಡಿಸಿ ಒಲಿಸು! ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು! ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು. "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ ...
ಸಿ. ಪಿ. ರವಿಕುಮಾರ್ ಕರ್ನಾಟಕ ನಾಡಗೀತೆಯನ್ನು ಹಾಡುವವರಿಗೆ/ಕೇಳುವವರಿಗೆ ಅದರ ಅರ್ಥ ತಿಳಿಯದೇ ಇದ್ದರೆ ಈ ಬ್ಲಾಗ್ ಬರಹವನ್ನು ಅವರು ಓದಬಹುದು. ಆದಷ್ಟೂ ಸರಳವಾಗಿ ಕವಿತೆಯ ಸಾರವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ. ಈ ವಿಶಿಷ್ಟ ಕವಿತೆಯಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಇದನ್ನು ಅವರು ರಚಿಸಿದ್ದು ತಮ್ಮ ಹದಿಹರೆಯದಲ್ಲಿ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ! ಇಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲ...
ಸಿ ಪಿ ರವಿಕುಮಾರ್ ಮಾ ಡುವವರು ಆಡರು, ಆಡುವವರು ಮಾಡರು ಎನ್ನುವುದು ಹಳೆಯ ಕಾಲದ ಮಾತಾಯಿತು. ಇಂದು ಯಾವುದೇ ವಸ್ತುವನ್ನು (ತಯಾರು) ಮಾಡಿದವರು ಆsಡ್ ಮಾಡದಿದ್ದರೆ ಅವರನ್ನು ಯಾರು ಕೇಳುತ್ತಾರೆ ಹೇಳಿ? ಉದಾಹರಣೆಗೆ ಒಂದು ಉಪಾಹಾರಗ್ರಹವನ್ನೇ ತೆಗೆದುಕೊಳ್ಳಿ. ದೋಸೆಯ ಘಮಘಮ ಪರಿಮಳವನ್ನು ಆಸ್ವಾದಿಸಿ ಅಥವಾ ದೋಸೆಗೂ ಹಂಚಿಗೂ ನಡೆಯುವ ಚೊಂಯ್ ಎಂಬ ಪ್ರೇಮಸಲ್ಲಾಪದಿಂದ ಆಕರ್ಷಿತರಾಗಿ ಜನ ಉಪಾಹಾರಗ್ರಹಗಳಿಗೆ ಮುತ್ತುತ್ತಿದ್ದ ಕಾಲ ಒಂದಿತ್ತು. ದೋಸೆ ಎಂದರೆ ಬರೀ ದೋಸೆ ಮಾತ್ರ ಆಗಿದ್ದ ಕಾಲವದು. ಇದು ಹೇಳಿ ಕೇಳಿ ಇನೊವೇಶನ್ ಯುಗ! ಒಂದು ತೊಂಬತ್ತೊಂಬತ್ತು ವಿಧದ ದೋಸೆಗಳಾದರೂ ಇಂದು ಇವೆ. "ಚಿನ್ನದ ಬಣ್ಣ ಬರುವವರೆಗೂ ಕಾವಲಿಯ ಮೇಲೆ ಬೇಯಿಸಿ" ಎಂಬ ಸೂಚನೆಯನ್ನು ಹಿಂದೆ ಅಡುಗೆ ಸಾಹಿತ್ಯದಲ್ಲಿ ಕಾಣಬಹುದಿತ್ತು. ಇಂದು ಈ ಸೂಚನೆಗೆ ವಿಭಿನ್ನ ಅರ್ಥವಿದೆ! ಏಕೆಂದರೆ ಚಿನ್ನದ ಹಾಳೆಯನ್ನೇ ಆಲೂಗಡ್ಡೆ ಪಲ್ಯದ ಮೇಲೆ ಏರಿಸಿ ಗೋಲ್ಡನ್ ದೋಸಾ ತಯಾರಿಸಿದ್ದಾರೆ! ಕ್ಷಮಿಸಿ, ಮಾತು ಎಲ್ಲಿಗೋ ಹೋಯಿತು. ಉಪಾಹಾರಗ್ರಹದಲ್ಲಿ ಇಂಥ ಹೊಸಹೊಸ ಬಗೆಯ ದೋಸೆಗಳನ್ನು ಮಾಡಿದವನು ಅವುಗಳ ಬಗ್ಗೆ ಗಟ್ಟಿಯಾಗಿ ಆಡದಿದ್ದರೆ ಯಾರಿಗೆ ಗೊತ್ತಾಗುತ್ತದೆ? ತನಗೆ ಸಾಟಿಯೇ ಇಲ್ಲವೆಂದು ಜಂಬ ಪಡುತ್ತಿದ್ದ ಮಸಾಲೆದೋಸೆಗೆ ಜಬರ್ದಸ್ತ್ ಪೈಪೋಟಿಯಾಗಿ ಪೀಟ್ಜಾ, ಬರ್ಗರ್ ಬಂದಿವೆ! ಹೀಗಾಗಿ ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ