ಅಂತರ
ಅಕ್ಕಪಕ್ಕದಲ್ಲಿ ಬೆಳೆಯುತ್ತಿದ್ದವು ಹೊಲದ ತುದಿಯಲ್ಲಿ
ಒಂದು ಗುಲಾಬಿ ಪೊದೆ ಮತ್ತು ಒಂದು ನೀಲಗಿರಿ ಮರ
ಕಂಗೊಳಿಸುತ್ತಿದ್ದವು ಎರಡೂ ಹಸಿರು ಹಸಿರಾಗಿ
ಗಾಳಿ,ಮಳೆಗಳ ಕುರಿತು ಸಂಭಾಷಣೆ ಪರಸ್ಪರ.
ಒಂದು ಗುಲಾಬಿ ಪೊದೆ ಮತ್ತು ಒಂದು ನೀಲಗಿರಿ ಮರ
ಕಂಗೊಳಿಸುತ್ತಿದ್ದವು ಎರಡೂ ಹಸಿರು ಹಸಿರಾಗಿ
ಗಾಳಿ,ಮಳೆಗಳ ಕುರಿತು ಸಂಭಾಷಣೆ ಪರಸ್ಪರ.
ಹರಡಿಕೊಂಡಿತು ಗುಲಾಬಿಯ ಹೊದರು,
ನೀಲಗಿರಿ ಬೆಳೆಯಿತು ಬಾನೆತ್ತರ
ಈಗ ನೀಲಗಿರಿಯ ಮಾತಲ್ಲಿ ಹೊಸತನ:
ಹಾರಾಡುವ ಹದ್ದು, ನೀಲಾಕಾಶ, ಗಿರಿಶಿಖರ.
"ನಾನೇ ದೂಡ್ಡವನೆಂದು ಬಗೆದಂತಿದೆ ನೀನು!"
ಗುಲಾಬಿಯ ಹೊದರು ಮಾಡಿಕೊಂಡಿತು ಬೇಸರ
ಕೇಳಿಸಲಿ ಮೇಲಿರುವ ಮರದ ತುದಿಗೆಂದು ಜೋರಾಗಿ
ಕಿರುಚಿ ಹರಡಿತು ತನ್ನ ಅಪಸ್ವರ.
"ಹಳೆಯದೆಲ್ಲಾ ಮರೆತುಹೋಯಿತು ಅಲ್ಲವೇ
ನಿನಗೆ ಎತ್ತರ ಬೆಳೆದೆನೆಂಬ ಅಹಂಕಾರ!"
"ನಾನು ಬೆಳೆದದ್ದು ನಿಜ, ಆದರೆ ನೀನು ಹಾಗೇ
ಕುಬ್ಜನಾಗೇ ಉಳಿದದ್ದು ಸೃಷ್ಟಿಸಿತು ಅಂತರ"
ಮೂಲ: ಶೆಲ್ ಸಿಲ್ವರ್ಸ್ಟೀನ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ