ನನ್ನ ನೆರಳು
ನನ್ನ ನೆರಳು
ನನಗೊಬ್ಬ ಸ್ನೇಹಿತನಿದ್ದಾನೆ, ಅವನ ಹೆಸರು ನೆರಳು
ನಮ್ಮ ಸ್ನೇಹ ಹೇಗೆಂದರೆ ಹೇಗೋ ಜೀವ-ಕೊರಳು
ನನ್ನೊಂದಿಗೇ ಇರುತ್ತಾನೆ ಯಾವಾಗಲೂ, ಒಳಗೂ ಹೊರಗೂ
ಮಾತಾಡುವುದಿಲ್ಲ ಒಂದೂ ಎಂಬುದೇ ಒಂದು ಕೊರಗು
ಅಡಿಯಿಂದ ಮುಡಿವರೆಗೆ ಎಲ್ಲ ನನ್ನ ಹಾಗೇ ಇವನು
ನಾನು ಸೇರುವ ಸ್ಥಳವನ್ನು ನನಗಿಂತ ಮುಂಚೆ ಸೇರುವನು
ಏನೋ ವಿಚಿತ್ರವಿದೆ ಇವನು ಬೆಳೆಯುವ ರೀತಿಯಲ್ಲಿ
ಮಕ್ಕಳು ಬೆಳೆಯುವಾಗ ಬೆಳೆಯುವರು ಮಂದಗತಿಯಲ್ಲಿ
ಆದರೆ ಇವನೋ! ಒಮ್ಮೆಲೇ ಉದ್ದವಾಗುವನು ಒಮ್ಮೊಮ್ಮೆ!
ರಬ್ಬರ್ ಚೆಂಡಿನ ಹಾಗೆ ಪುಟಿದು ಮೇಲೆದ್ದು ಛಂಗನೆ!
ಗಿಡ್ಡವಾಗುವನು ಒಮ್ಮೊಮ್ಮೆ ಹಠಾತ್ತಾಗಿ ಮಾಯಾವಿ
ಮಾಯವಾಗಿಬಿಡುವನು ಎಲ್ಲೋ ಹೇಳದೇ ಕೇಳದೇ!
ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ