ಕವಿತೆಯ ಆರಂಭ
ಕವಿತೆ ಪ್ರಾರಂಭವಾಗುವುದು
ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡ ಅನುಭವದಲ್ಲಿ
ದೂರವಿದ್ದಾಗ ಕಾಡುವ ಮನೆಯ ನೆನಪಿನಲ್ಲಿ
ಅಥವಾ ವಿರಹದ ಜ್ವರದಲ್ಲಿ.
ಹೊರಬರಲು ತವಕಿಸುವ ಭಾವನೆ, ಕವಿತೆ.
ಕೃತಾರ್ಥ ಭಾವನೆಯ ಶೋಧನೆ, ಕವಿತೆ.
ಭಾವನೆಗೆ ಸಿಕ್ಕಿದಾಗ ಅದರ ಆಲೋಚನೆ
ಮತ್ತು ಆಲೋಚನೆಗೆ ದಕ್ಕಿದಾಗ ಮಾತು
ಆಗ ಕವಿತೆಗೆ ದೊರಕುವುದು ಪೂರ್ಣತೆ.
ಮೂಲ: ರಾಬರ್ಟ್ ಫ್ರಾಸ್ಟ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ