ವಿನಯ
ಜನ ಕೇಳಿದಾಗ ಪ್ರಶ್ನೆ
ಕೊಡುವೆ ಸಿದ್ಧ ಉತ್ತರವನ್ನೇ :
"ಓಹೋ ಚೆನ್ನಾಗಿದ್ದೇನೆ, ಎಲ್ಲಾ ನಿಮ್ಮ ಆಶೀರ್ವಾದ"
ಮತ್ತೊಬ್ಬರು ಕೇಳಿದಾಗ ಪ್ರಶ್ನೆ
ನನ್ನ ಉತ್ತರ ಪುನರಾವರ್ತನೆ:
"ನೀವು ಹೇಗಿದ್ದೀರಿ? ನಾನು ಚೆನ್ನಾಗಿದ್ದೇನೆ! ಧನ್ಯವಾದ!"
ನಾನು ಉತ್ತರಿಸುವುದು ಖಂಡಿತ
ನನ್ನ ಉತ್ತರ ಪೂರ್ವನಿಶ್ಚಿತ
ಮತ್ತು ವಿನಯಪೂರ್ವಕ ಯಾವಾಗಲೂ.
ಆದರೆ
ಕೆಲವೊಮ್ಮೆ ಅಂದುಕೊಳ್ಳುತ್ತೇನೆ
ಅವರು ಏನೂ ಕೇಳದಿದ್ದರೆ ಮೇಲು.
ಮೂಲ: ಏ ಏ ಮಿಲ್ನ್
ಕನ್ನಡ ಅನುವಾದ: ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ