ಕವಿಯ ವ್ಯಕ್ಷ
ಕವಿಯ ವೃಕ್ಷದ ಕೆಳಗೆ
ವಿರಮಿಸು ಬಾ ನನ್ನೊಂದಿಗೆ
ಕತೆಗಳ ಎಲೆಗಳ ದಟ್ಟ ಚಾವಣಿಯ ಮೇಲೆ
ನೋಡು ಪದಗಳ ಬಲೆಗಳ ಹೆಣಿಗೆ
ಕವಿಯ ವೃಕ್ಷದ ರೆಂಬೆ ಕೊಂಬೆಗಳು ಹೇಗೆ
ನೋಡು ಹರಡಿವೆ ಬೆಟ್ಟದಿಂದ ಕಡಲಿನವರೆಗೆ
ವಿಶ್ರಮಿಸು ಬಾ ಕನಸು ಕಾಣುತ್ತಾ
ಅಥವಾ ಮೇಲೇರು ಮರದ ತುದಿಯತ್ತ -
ಏರುವಾಗ ಮಾತ್ರ ಸ್ವಲ್ಪ ಜಾಗ್ರತೆ ವಹಿಸು
ಮೇಲಿಂದ ಬಿದ್ದಾವು ಪ್ರಾಸ, ಅಲಂಕಾರ, ಛಂದಸ್ಸು.
ಮೂಲ: ಶೆಲ್ ಸಿಲ್ವರ್ಸ್ಟೀನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ