ನೋಟ



ಸ್ಟೀವನ್ ನನ್ನನ್ನು ಚುಂಬಿಸಿದ  ವಸಂತದಲ್ಲಿ

ರಾಬಿನ್ ಚುಂಬಿಸಿದನು ಶಿಶಿರದಲ್ಲಿ.

ಕೊಲಿನ್ ಮಾತ್ರ ಚುಂಬಿಸಲೇ ಇಲ್ಲ

ಸುಮ್ಮನೇ ನೋಡಿದ ಕಣ್ಣಿಟ್ಟು ಕಣ್ಣಲ್ಲಿ.


ನಗೆಯಲ್ಲಿ ಕರಗಿಹೋಯಿತು ಸ್ಟೀವನ್ ಕೊಟ್ಟದ್ದು

ಆಟದಲ್ಲಿ ಕಳೆದುಹೋಯಿತು ರಾಬಿನ್ ಚುಂಬನ

ಕೊಲಿನ್ ನೆಟ್ಟನಲ್ಲ ನನ್ನ ಕಡೆ ನೋಟ

ಕಾಡುತ್ತದೆ ಅದು ಇಂದಿಗೂ ಪ್ರತಿದಿನ.


ಮೂಲ: ಸಾರಾ ಟೀಸ್ ಡೇಲ್ 

ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)