ವಿನಿಮಯ

 



ರೊಟ್ಟಿ ಇದೆ ನನ್ನ ಕೈಯಲ್ಲಿ ಮತ್ತು ನಿಮ್ಮ ಕೈಯಲ್ಲಿದೆ ನಾಣ್ಯ

ಕೈ ಬದಲಿಸಿದಾಗ ವಸ್ತುಗಳು ಉಂಟಾಗುವ ವಿನಿಮಯ ಸಾಮಾನ್ಯ

ರೊಟ್ಟಿ ನಿಮ್ಮ ಕೈಯಲ್ಲಿದೆ ಮತ್ತು ನಾಣ್ಯ ನನ್ನ ಕೈಯಲ್ಲಿದೆ, ಅಷ್ಟೇ.

ನನ್ನ ಬಳಿ ಇದೆ ಪೈಥಾಗೊರಸ್ ಪ್ರಮೇಯ ಮತ್ತು ನಿಮ್ಮಲ್ಲಿದೆ 

ಒಂದು ಕವಿತೆ

ಕೊಟ್ಟಾಗ ಇದನ್ನು ಒಬ್ಬರಿನ್ನೊಬ್ಬರಿಗೆ ಉಂಟಾಗುವ ವಿನಿಮಯ ಅಸಾಮಾನ್ಯ

ನಿಮ್ಮ ಬಳಿ ಇದೆ ಕವಿತೆ ಮತ್ತು ಪ್ರಮೇಯ, ನನ್ನಲ್ಲೂ ಇದೆ ಪ್ರಮೇಯ ಮತ್ತು ಕವಿತೆ.


--ಮಿಶೆಲ್ ಸೆರ್ (ಫ್ರೆಂಚ್ ತತ್ವಜ್ಞಾನಿ) ಅವರ ಮಾತುಗಳನ್ನು ಆಧರಿಸಿ



Michel Serres, French philosopher

(1/09/1930 - 1/06/2019) 

ಸಿ ಪಿ ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)