ಪ್ರಾಸವಿಲ್ಲದ ಕವಿತೆ

 
ಇದು ಕೂಡಾ ಅಂಥದ್ದೊಂದು ಕವಿತೆ
ಯಾವ ಕವಿತೆಗಳಲ್ಲಿ ಇರುವುದಿಲ್ಲವೋ ಪ್ರಾಸ
ಪ್ರಸಿದ್ಧ ಸಾಹಿತ್ಯಕ ಪತ್ರಿಕೆಯಲ್ಲಿ 
ಪ್ರಕಟವಾಗುತ್ತವಲ್ಲ ಪ್ರತಿ ಮಾಸ ತಿಂಗಳು.

ಇದು ಕೂಡಾ ಅಂಥದೊಂದು ಸಾಚಾ ಕವನ
ಅಂಥ ಕವನಗಳಲ್ಲಿ ಪ್ರಾಸವು ತುತ್ತಿನಲ್ಲಿ ಸಿಕ್ಕ ಕಲ್ಲು
ಗಂಭೀರವಾದದ್ದನ್ನು ಹೇಳುತ್ತಿರುವಾಗ ಪ್ರಾಸಪದ
ಕಟಂ ಎಂದು ಎದುರಾಗಿ ಹೆದರುವುದು ಹಲ್ಲು ದಂತ.

ನೋಡಿ ಪ್ರಾಸವು ಬಹಳ ಅಗ್ಗದ ಸರಕು
ಪ್ರಾಸಬದ್ಧ ಕವಿತೆಗಳಿಗೆ ಸ್ವಲ್ಪ ತೂಕ ಕಡಿಮೆ.
ಪ್ರಾಸಕ್ಕೆ ಕಟ್ಟುಬಿದ್ದರೆ ಕವಿತೆಯಲ್ಲಿ ಹೇಗಿದ್ದೀತು
ಸ್ವೋಪಜ್ಞತೆ, ಅಸ್ಮಿತೆ ಮತ್ತು ಪ್ರೌಢಿಮೆ ಕಲಾತ್ಮಕ ಅಭಿವ್ಯಕ್ತಿ.

ಇದು ಕೂಡಾ ಅಂಥದೊಂದು ಕವಿತೆ,
ಯಾವುದು ಮನುಷ್ಯನ ಸ್ಥಿತಿಯನ್ನು ಕುರಿತು
ಏನಾದರೂ ಗಂಭೀರವಾದವನ್ನು ಹೇಳಲು ಹೊರಟು
ಒಮ್ಮೆಲೇ ಏಕಾಏಕಿ ಕೊನೆಗೊಳ್ಳುತ್ತದಲ್ಲ, ಅಂಥದ್ದು.


ಮೂಲ : ಬ್ರಯಾನ್  ಬಿಲ್ಸ್ಟನ್ 
ಕನ್ನಡಕ್ಕೆ : ಸಿ ಪಿ ರವಿಕುಮಾರ್ 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ