ಶಾಲೆಗೆ ಏಕೆ ತಡವಾಯಿತು


ಮೂಲ: ಸ್ಟೀವ್ ಟರ್ನರ್


ಬೆಳಗ್ಗೆ ಏಳುವುದು ತಡವಾಯಿತು
ಏಕೆಂದರೆ ವಿಪರೀತ ಸುಸ್ತಾಗಿತ್ತು.
ಯಾಕೆ ಸುಸ್ತಾಯಿತು ಅಂದರೆ 
ರಾತ್ರಿ ಮಲಗುವುದು ತಡವಾಗಿತ್ತು 
ಮಲಗಿದ್ದು ತಡವಾಯ್ತೇಕೆ ಎಂದರೆ 
ಹೋಂವರ್ಕ್ ಮಾಡುತ್ತಿದ್ದೆ
ಹೋಂವರ್ಕ್ ಮಾಡುತ್ತಿದ್ದದ್ದು ಯಾಕೆಂದರೆ
ನಮ್ಮ ಟೀಚರ್ ಕೊಟ್ಟರು, ಅದಕ್ಕೇ.
ಅವರು ಯಾಕೆ ಹೋಂ ವರ್ಕ್ ಕೊಟ್ಟರು ಅಂದರೆ
ನನಗೆ ಶಾಲೆಯಲ್ಲಿ ಅರ್ಥ ಆಗಲಿಲ್ಲ.
ಯಾಕೆ ಅರ್ಥ ಆಗಲಿಲ್ಲ ಅಂದರೆ
ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ.
ಯಾಕೆ ಕೇಳಿಸಿಕೊಳ್ಳಲಿಲ್ಲ ಅಂದರೆ
ನಾನು ಕಿಟಕಿಯ ಹೊರಗೆ ನೋಡ್ತಿದ್ದೆ
ಯಾಕೆ ನೋಡ್ತಿದ್ದೆ ಅಂದರೆ 
ಅಲ್ಲಿ ಮೋಡ ಕಾಣಿಸಿತು
ಹೀಗಾಗಿ ಸರ್ ನಾನು ಲೇಟಾಗಲು 
ಒಂದು ಮೋಡ ಕಾರಣ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ