ಬಿಡುವು

 ಬಿಡುವು

ಮೂಲ: ವಿಲಿಯಂ ಹೆನ್ರಿ ಡೇವಿಸ್

ಕನ್ನಡ ರೂಪಾಂತರ: ಸಿ.ಪಿ. ರವಿಕುಮಾರ್


ಏನಿದ್ದರೇನು ಬಂತು ಜೀವನದಲ್ಲಿ, ನಿಂತು
ದಿಟ್ಟಿಸಲು ಇಲ್ಲದಿದ್ದರೆ ಒಂದಷ್ಟು ಹೊತ್ತು ?
ಹೊಂಗೆಯಲ್ಲಿ ಭೃಂಗದ ಸಂಗೀತ ಕೇಳಿಬರುತ್ತಿದೆ-
ಯಾದರೂ ನಿಂತು ಕೇಳಲು ಇಲ್ಲ ಪುರುಸೊತ್ತು;
ಬೆಟ್ಟಕಾನುಗಳಲ್ಲಿ ಅಲೆದಾಡಿ ಬಲಾಕ ಪಂಕ್ತಿಯೊಳು 
ಕಾಣದಿದ್ದರೆ ದೇವರ ಸ್ಪಷ್ಟ ರುಜುವಾತು?

ಇಲ್ಲದಿದ್ದರೆ ಸಮಯ ಹಾಡುಹಗಲಲ್ಲಿ ನೋಡಲು
ಹರಿವ ತೊರೆಯಲ್ಲಿ ಹೊಳೆವ ನಕ್ಷತ್ರಗಳ ಹೊನಲು!
ಹೊಳೆಯು ತೊಳೆಯುವ ನುಣುಪುಗಲ್ಲಿನಲಿ ದೃಷ್ಟಿ
ನೆಟ್ಟು ಕಲ್ಪಿಸದಿದ್ದರೆ ಶಿಲಾಬಾಲಿಕೆಯ ಚೆಲುವು,
ಅವಳ ಗೆಜ್ಜೆಯ ಸದ್ದು, ಕೊಳಲು, ಡಮರುಗ, ಡೋಲು,
ಕೇಳುತ್ತಾ ಏರದಿದ್ದರೆ ಮಾಯಾ ಸಂಗೀತದ ಅಮಲು -

ಏನಿದ್ದರೇನು ಬಂತು ಜೀವನದಲ್ಲಿ ಅಷ್ಟೈಶ್ವರ್ಯ
ಇಲ್ಲದಿದ್ದರೆ ಸಮಯ ಸವಿಯಲು ಸೌಂದರ್ಯ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ