ಪದಗಳು ಮಾಂತ್ರಿಕ ದಂಡಗಳು

 

ಮೂಲ: ವಾಲ್ಟ್ ವ್ಹಿಟ್ಮನ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್


ನಾವು ಪದ್ಯ ಬರೆಯುವುದು ಮತ್ತು ಓದುವುದು 
ಅದೊಂದು ಆಕರ್ಷಕ ಕೆಲಸ ಎಂದಲ್ಲ.
ನಾವು ಪದ್ಯ ಬರೆಯುವುದು ಮತ್ತು ಓದುವುದು 
ನಾವು ಮನುಷ್ಯವರ್ಗಕ್ಕೆ ಸೇರಿದ ಕಾರಣ.
ಭಾವೋದ್ರೇಕ ಮನುಷ್ಯನಿಗೆ ಸಹಜ ಗುಣ.
ವೈದ್ಯಕೀಯ, ಇಂಜಿನಿಯರಿಂಗ್, ಲಾಯರಿ
ಇವೆಲ್ಲ ಶ್ರೇಷ್ಠ ಕೆಲಸಗಳೇ, ನಿಸ್ಸಂದೇಹ,
ಮತ್ತು ಮನುಷ್ಯ ಬದುಕಿರಲು ಇವೆಲ್ಲ ಬೇಕು.
ಆದರೆ ಪದ್ಯ, ಪ್ರೇಮ, ಸೌಂದರ್ಯ ಇವೆಲ್ಲ
ಮನುಷ್ಯ ಬದುಕಿರಲು ಕಾರಣ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ