ಗರಿ ಮೂಡಿದ ಕ್ಷಣ

ಹೊಸದಾಗಿ ಪಟ್ಟಾಪಟ್ಟೆ ಸುಣ್ಣಬಣ್ಣ ಬಳಿದ ಹೊಗೆಕೊಳವೆಗಳು
ನಮ್ಮ ಹಿರಿಯರು ವಂಶಜರಿಗಾಗಿ ಬಿಟ್ಟುಹೋದ ರಚನೆಗಳು
ಮಾತ್ರವಲ್ಲ. ಇವುಗಳಲ್ಲಿ ಗೂಡು ಕಟ್ಟುವ ಸಾಹಸ ತೋರಿದ
ಪೆರಿಗ್ರೀನ್ ಗಿಡುಗಗಳಿಗೆ ವಾಸಸ್ಥಾನ ಕೂಡಾ.
ಗಂಟೆಗೆ ಇನ್ನೂರು ಮೈಲಿ ಕ್ರಮಿಸುತ್ತಾ ಹಾರಿ ಬಂದಿವೆ,
ಯಾವ ಮಿಕವೂ ತಪ್ಪಿಸಿಕೊಳ್ಳಲಾರದು ಅಂಥ ವೇಗ, ಶಕ್ತಿ.
ಇಲ್ಲಿ ಗೂಡು ಕಟ್ಟಿ ಪ್ರಾರಂಭಿಸಿವೆ ವಂಶಾಭಿವೃದ್ಧಿಯ ಕೆಲಸ.
ನಿಶ್ಚಯ ನಂಬಿಕೆಗಳ ಕೂಟವೆಂದರೆ ಆಗದು ಅತಿಶಯೋಕ್ತಿ.

ನೀವಿಬ್ಬರೂ ಅಲ್ಲೇ ಎದೆಯೆತ್ತಿ ನಿಂತು ಗಮನಿಸುತ್ತಿದ್ದಿರಿ 
ಹಾರಲು ಕಲಿತಾಗ ನಾವು ರೆಕ್ಕೆಗಳಲ್ಲಿ ಒಗ್ಗೂಡಿಸಿಕೊಂಡು ಧೈರ್ಯ. 
ಮೊದಲ ಸಲ ನಾವು ಬೇಟೆಯ ಮೇಲೆ ಎಗರಿದಾಗಲೂ ಮತ್ತು
ಹುಡುಕಿಕೊಂಡಾಗ ಒಡನಾಡಿಗಳನ್ನು ಮಾಡುತ್ತಾ ಪ್ರಣಯರವ.
ಪಾಲಕರು ನೀವು, ಎಲ್ಲೇ ಇರಲಿ, ನಮ್ಮ ಮೇಲೆ ಇಟ್ಟಿದ್ದಿರಿ ಹದ್ದಿನ ಕಣ್ಣು
ನಾವು ಗರಿಬಿಚ್ಚಿ ಹಾರಿ ಅಳೆಯುವವರೆಗೂ ಆಕಾಶದ ಎತ್ತರವನ್ನು.

ಮೇವ್ ಓ ಸಲೈವನ್

ಕನ್ನಡಕ್ಕೆ: ಸಿ ಪಿ ರವಿಕುಮಾರ್ 






ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ