ಎಲ್ಲವೂ ಸರಿಯಾಗುವುದು

 ಎಲ್ಲವೂ ಸರಿಯಾಗುವುದು

ಮೂಲ: ಡೆರೆಕ್ ಮೇಹನ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್


ಇಳಿಜಾರು ಚಾವಣಿಗೆ ಹೊಂದಿಸಿದ ಕಿಟಕಿಯ ಆಚೆ 
ಕಾಣುವುದು ಮೋಡಗಳು ಚೆದುರುವ ನೋಟ
ಮತ್ತು ತಾರಸಿಯ ಮೇಲೆ ಹೊಯ್ದಾಡುವುದು 
ಸಾಗರವು ಉಕ್ಕಿ ಮೇಲೇಳುವ ದೃಶ್ಯದ ಪ್ರತಿಬಿಂಬ.
ಸಾವುಗಳು ಸಂಭವಿಸುತ್ತವೆ, ಅದರಲ್ಲೇನು ಅನುಮಾನ,
ಆದರೆ ಅದರ ಆಲೋಚನೆ ಈಗ ಏತಕ್ಕೆ, ಬದಿಗಿಡು.
ಕೇಳಿಕೊಳ್ಳದಿದ್ದರೂ ಬರೆಯುತ್ತದೆ ಸಾಲುಗಳನ್ನು ಕಾಣದ ಕೈ
ಮೌನವಾಗಿ ಗಮನಿಸುವ ಹೃದಯದ ಮೇಲೆ.
ಏನೇ ಆಗಲಿ ಸೂರ್ಯ ಉದಿಸಿ ಬಂದನು  ಮೇಲೆ;
ಉಜ್ವಲವಾಗಿ ಹೊಳೆಯುತ್ತಿವೆ ದೂರದ ಪಟ್ಟಣ, ಪೇಟೆ.
ಬೆಳ್ಳನೆಯ ಬೆಳಕಿನಲ್ಲಿ ನಾನು ಮಲಗಿದ್ದೇನೆ  ನೋಡುತ್ತಾ
ಕಾರ್ಮೋಡಗಳು ಕರಗಿ ಬೆಳಕು ಹರಿಸುವ ದಿವೋದಯ
ಎಲ್ಲವೂ ಸರಿಯಾಗುವುದು ಎನ್ನುತ್ತಿದೆ ಹೃದಯ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ