ನಾವು


ಮೂಲ: ಕ್ಯಾಥರೀನ್ ಕ್ಯಾಂಪ್ ಬೆಲ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್ 


ಕಪ್ಪು, ಕಂದು, ಬಿಳುಪು, 
ಬಣ್ಣ ಯಾವುದಾದರೇನು, 
ಮೈಮೇಲಿನ ತೊಗಲು, ಅಷ್ಟೇ 
ಒಳಗೆ ಹರಿವ ನೆತ್ತರು ಕೆಂಪು.

ಅವಳು ಅವನು ಅವರು ಇವರು
ಸರ್ವನಾಮ ಪದಗಳಷ್ಟೇ
ನನ್ನದೇ ವಿಭಿನ್ನ ರೂಪ
ಒಳಗೆ ನನ್ನದೇ ಸ್ವರೂಪ.
ಬಣ್ಣ ಗಾತ್ರ ಬೇರೆ ಅಷ್ಟೇ
ಕರೆಯಲೊಂದು ಹೆಸರು, ಅಷ್ಟೇ
ಚುಚ್ಚಿದರೆ ನೋವು ಒಂದೇ 
ತಬ್ಬಿದರೆ ನಲಿವು ಒಂದೇ.

ಹೆಸರು ಬೇರೆ ಬಣ್ಣ ಬೇರೆ 
ಆದರೂ ನಾವೆಲ್ಲ ನಾವೇ
ಎಲ್ಲರೂ ಮಾನಸರು
ಎಲ್ಲರೂ ಸಮಾನರು



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ