ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ

 ಮೂಲ ಕವಿತೆ: ಶೆಲ್ ಸಿಲ್ವ್ವರ್ಸ್ಟೀನ್
ಅನುವಾದ: ಸಿ. ಪಿ. ರವಿಕುಮಾರ್


ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ
ಚಿಟ್ಟೆಹುಳು ಹೇಳಿದ್ದೆಲ್ಲ ಅರ್ಥವಾಗುತ್ತಿತ್ತು ನನಗೆ
ಕಾಜಾಣಗಳ ಹರಟೆಗೆ ಸೂಸುತ್ತಿದ್ದೆ ಗುಪ್ತನಗೆ
ಮಲಗಿದ್ದಲ್ಲೇ ಹರಟುತ್ತಿದ್ದೆ ನೋಣವೊಂದರ ಜೊತೆಗೆ.

ಜೀರುಂಡೆಯ ಎಲ್ಲ ಪ್ರಶ್ನೆಗಳಿಗೂ ಉತ್ತರವಿತ್ತು ನನ್ನಲ್ಲಿ
ದನಿಗೂಡಿಸುತ್ತಿದ್ದೆ ಬೀಳುವ ಹಿಮಕಣಗಳ ಆರ್ತನಾದಕ್ಕೆ 
ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ
ಹೇಗಿತ್ತಪ್ಪ ಅದು, ಹೇಗಿತ್ತಪ್ಪ, ಮರೆತೇಹೋಯ್ತಲ್ಲ ಛೇ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)