ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ

Silhouette of Person Sitting Beside Body of Water
ಮೂಲ - ಶಕೀಲ್ ಬದಾಯೂನಿ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

(ಐ ಮುಹಬ್ಬತ್ ತೇರೇ ಅಂಜಾಮ್ ಪೇ ರೋನಾ ಆಯಾ ಎಂದು ಪ್ರಾರಂಭವಾಗುವ ಈ ಗಜಲ್ ತುಂಬಾ ಪ್ರಸಿದ್ಧ. ಇದನ್ನು ಬೇಗಂ ಅಖ್ತರ್ ಅವರ ಧ್ವನಿಯಲ್ಲಿ ನೀವು ಕೇಳಬಹುದು)

ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ
ಯಾವುದೋ ಮಾತಿಗೆ ನೋವಾಯಿತು, ಕಂಬನಿ ಮಿಡಿದೆ

ಹೇಗೋ ಭರವಸೆಯಲ್ಲಿ ಕಳೆಯುತಿತ್ತು ಪ್ರತಿಸಂಜೆ
ಇಂದು ಸಂಜೆ ಅದೇನಾಯಿತೋ ಕಂಬನಿ ಮಿಡಿದೆ

ಇತ್ತ ಒಲಿಯದ ಭಾಗ್ಯ, ಅತ್ತ ಜನರಿಂದ ಕಡುಟೀಕೆ,
ಪ್ರೇಮಪಥದ ಪ್ರತಿ ಹೆಜ್ಜೆಗೂ ಕಂಬನಿ ಮಿಡಿದೆ

ಬಂದಿತೇತಕೆ ನನ್ನದೇ ಮಡಿಲಿಗೆ ಪ್ರತಿ ವೇದನೆಯೂ
ಹಾ ವಿಧಿಯೇ! ನಿನ್ನ ಅಟ್ಟಹಾಸಕೆ ಕಂಬನಿ ಮಿಡಿದೆ


ತೆಗೆಯುವೆ ಏತಕೆ ಪ್ರೀತಿಪ್ರೇಮಗಳ ಮಾತು
ನನ್ನೆದೆಯ ಸೋಲನ್ನು ನೆನೆದು ಕಂಬನಿ ಮಿಡಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)