ಉಪವನ
ಮುಳ್ಳಿನಲ್ಲಿ ಎಂದೂ ಸಿಲುಕಿಲ್ಲವೋ ಯಾರ ಸೆರಗು
ಉಪವನದ ರಹಸ್ಯವನ್ನು ಅವರೇನು ಬಲ್ಲರು?
ಏಕಾಏಕಿ ನೀನು ಬಂದು ಬಿಡಬೇಡ ನನ್ನೆದುರು
ನಿಂತು ಹೋದೀತು ಒಮ್ಮೆಲೇ ನನ್ನ ಉಸಿರು
ಹೂವು ಹಾಗಿರಲಿ ಮುಳ್ಳುಗಳನ್ನೇ ಆಯ್ದುಕೊಂಡರೂ
ತುಂಬಿಲ್ಲ ಇನ್ನೂ ಹೂವಾಡಿಗನ ಸೆರಗು
ಹಕ್ಕಿಗೂಡಿಗೆ ಅದೇಕಷ್ಟು ಅಲಂಕಾರ
ಬಿದ್ದುಹೋದರೆ ರೆಂಬೆ ತಾಳದೇ ಭಾರ
ಉಪವನದ ಚೆಲುವನ್ನು ಬೆಳಗಿತಲ್ಲ ಕೋಲ್ಮಿಂಚು
ಬಂಧುವೋ ಶತ್ರುವೋ ಏನು ಹೇಳುವುದು?
ಹೂವುಗಳಿಗಿಂತ ಮುಳ್ಳುಗಳೇ ಎಷ್ಟೋ ಮೇಲು
ಮುಳ್ಳು ಉಪವನಕ್ಕಿಟ್ಟ ದೃಷ್ಟಿಬೊಟ್ಟು
ಮೂಲ: ಫನಾ ನಿಜಾಮಿ ಕಾನ್ಪುರಿ
ಅನುವಾದ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ