ಎಷ್ಟಿರಬಹುದು ಕಾಲದ ವಯಸ್ಸೆಂದು ಕೇಳುವೆಯಾ

ಮೂಲ ... ಸಾಗರ್ ಸಿದ್ದಿಕಿ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್

Woman's Face Behind the Leaf Close-up Photo
ಎಷ್ಟಿರಬಹುದು ಕಾಲದ ವಯಸ್ಸೆಂದು ಕೇಳುವೆಯಾ
ಪ್ರಿಯೇ! ನನ್ನ ಉತ್ತರ 'ನಿನ್ನ ಮಿಲನದ ಗಳಿಗೆ'

ತಟ್ಟುತಿರುವರು ಯಾರು ರೆಪ್ಪೆಗಳ ಬಾಗಿಲು?
ಇರುಚಲಿರಬಹುದು ಸುರಿಯುತ್ತಿಹ ಮಳೆಗೆ

ನನಗೆ ಗೊತ್ತಿರಲಿಲ್ಲ ಕೂರಲುಗಿನ ಖಡ್ಗವೂ
ವೇಷ ತೊಟ್ಟಿರಬಹುದು ಹೂರೆಂಬೆಯ ಹಾಗೆ

ಹಾರಾಡುತ್ತಿವೆ ಹಣೆಯ ಮೇಲೆ ಮುಂಗುರುಳು
ಜಗಳವಾಗಿರಬಹುದು ತಂಗಾಳಿಗೆ ತಿಂಗಳಿಗೆ

ಪರಲೋಕವನ್ನೇ ಹುಡುಕಿ ಹೊರಟವರೇ ಜೋಕೆ
ದಾರಿಯಲ್ಲಿ ಜೀವನವು ಬೆಳೆಸೀತು ಸಲಿಗೆ

ಏಕೆ ಬಿಗಿದಿರುವೆ ಕೇಶವನ್ನು ಗಂಟಿನೊಳು
ಹೂವೊಂದರ ಜೀವ ಇದ್ದೀತು ಅದರೊಳಗೆ

ಏಕೆ ಚಿಂತಿಸುವೆ ಕಾಮನೆಯು ಕಳೆದುಹೋಯ್ತೆಂದು
ಅಲ್ಲೇ ಬಿದ್ದಿರಬಹುದು ಅವಳ ಬಾಗಿಲ ಬಳಿಗೆ


ಮೃತ್ಯುವೆಂಬ ವಸ್ತು ಇದೆಯಲ್ಲ 'ಸಾಗರ್'
ಮತ್ತೊಂದು ಕೊಂಡಿ ಜೀವನದ ಸರಪಳಿಗೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)