ನಮ್ಮ ವಿಳಾಸವಿನ್ನೂ ಅದುವೇ, ಬದಲಾಗಿಲ್ಲ

ಮೂಲ ... ಅಹ್ಮದ್ ಮುಶ್ತಾಕ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
Silhouette Photo of Person Holding Door Knob
ನಮ್ಮ ವಿಳಾಸವಿನ್ನೂ ಅದುವೇ, ಬದಲಾಗಿಲ್ಲ
ಮನೆಯಾಗಲಿ ನಮ್ಮ ಕತೆಯಾಗಲಿ ಬದಲಾಗಿಲ್ಲ

ಪಯಣಕ್ಕಾಗಿದೆ ಇನ್ನೂ ಅದುವೇ ಮುರುಕಲು ನಾವೆ
ನಿಂತ ನೀರಿನ ನದಿಯೂ ಅದುವೇ, ಬದಲಾಗಿಲ್ಲ

ಇದುವೇ ವಧಾಸ್ಥಾನ, ಕರುಣಾಶ್ರಯವೂ ಇದುವೇ
ನಾಮಶೇಷವೂ ಇಲ್ಲದ ಹೃದಯವೂ ಬದಲಾಗಿಲ್ಲ

ಯಾವ ಗುರಿಗೂ ಕೊಂಡೊಯ್ದು ನಾವು ಹಿಡಿದ ಈ ಹಾದಿ
ಇಕ್ಕೆಡೆಗೂ ತೆರೆಯದ ಕಿಟಕಿಯೂ ಬದಲಾಗಿಲ್ಲ

ನಮ್ಮ ಬಿಸಿಲಿನಲಿ ನಾವು ಕುಳಿತಿರುವೆವು 'ಮುಶ್ತಾಕ್'
ನಮ್ಮ ಹಿಂಬಾಲಿಸುವ ನೆರಳೂ ಬದಲಾಗಿಲ್ಲ |



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)