ಕಟ್ಟುತ್ತಿರುವೆ ಗಾಜಿನ ಮನೆಯನ್ನು ನಾನು
ಮೂಲ: ಕತೀಲ್ ಶಿಫಾಯಿ
ಕನ್ನಡಕ್ಕೆ: ಸಿ.ಪಿ. ರವಿಕುಮಾರ್

ತತ್ತರಿಸಿಹೋಗಿ ಪರಿಸ್ಥಿತಿಯಿಂದ ನಾನು
ಕಟ್ಟುತ್ತಿರುವೆ ಗಾಜಿನ ಮನೆಯನ್ನು ನಾನು
ನನ್ನ ಎದೆಗೂಡೊಳಗೆ ಇರುವ ಮೇಣದ ಹೃದಯವನ್ನು
ರಕ್ಷಿಸಲು ಸೂರ್ಯನನ್ನು ಹೊದ್ದಿಹೆನು
ಕಣ್ಣ ದೃಷ್ಟಿ ಕಳೆದುಕೊಂಡು ಕುರುಡಾದ ಸಮಾಜಕ್ಕೆ
ಕನ್ನಡಿಯನ್ನು ತೋರುತ್ತಲಿರುವೆ ನಾನು
ಸಖನಿಗೆ ದ್ರೋಹ ಬಗೆಯುತ್ತ ಗುಟ್ಟಾಗಿ
ಮುಖದಲ್ಲಿ ಮುಗುಳುನಗೆ ತಂದುಕೊಂಡಿಹೆನು
ನೀರು ತುಂಬಿದ ನದಿಯಂತೆ ಜಗತ್ತು
ತೀರದೇ ದಾಹ ಮರಳಿ ಬರುತಿಹೆನು
ಅಭಾವವಿದೆ ಕಲ್ಲುಗಳಿಗೆ ಶಹರಿನಲಿ
ಭಾವಗಳ ಹೊಡೆತಕ್ಕೆ ತತ್ತರಿಸುತಿಹೆನು
ಓಗೊಡಬಹುದು ಒಳಗಿನಿಂದ ಉದಾಸೀನತೆ
ಬಾಗಿಲು ನನ್ನದೇ ನಾನು ತಟ್ಟುತ್ತಿರುವೆನು
ಬರಲಿಲ್ಲ 'ಕತೀಲ್' ಒಬ್ಬನೂ ಗೆಳೆಯ
ನೆರಳನ್ನೇ ನಾನು ಆಲಂಗಿಸಿಕೊಳ್ಳುತ್ತಿಹೆನು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ