ಟಾಲ್ಸ್ ಟಾಯ್ ಮಹರ್ಷಿಯ ಎರಡು ಕತೆಗಳು



ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಒಂದು ಸಣ್ಣಕತೆಯ ಹೆಸರು 'ಟಾಲ್ಸ್ ಟಾಯ್ ಮಹರ್ಷಿಯ ಭೂರ್ಜವೃಕ್ಷಗಳು.'  ಅವರು ಲಿಯೋ ಟಾಲ್ಸ್ ಟಾಯ್ ನನ್ನು "ಮಹರ್ಷಿ" ಎಂದೇಕೆ ಕರೆದರು?  ಋಷಿ ಎಂದರೆ ಜಟೆ ಕಟ್ಟಿಕೊಂಡು ತಪಸ್ಸು ಮಾಡಬೇಕಾಗಿಲ್ಲ!  ಟಾಲ್ಸ್ ಟಾಯ್ ನೋಡಲೂ ಕೂಡಾ ಋಷಿಯಂತೆ ಕಾಣುತ್ತಾನೆ, ಬಿಡಿ! ಅವನ ಬರವಣಿಗೆ ಯಾವ ತಪಸ್ಸಿಗೆ ಕಡಿಮೆ? ಟಾಲ್ಸ್ ಟಾಯ್ ತನ್ನ ಜೀವನದ ಕೊನೆಯಲ್ಲಿ ಬರೆದ ಕತೆಗಳಲ್ಲಿ ಋಷಿಗಳು ಹೇಳಿದರು ಎನ್ನಲಾಗುವ ನೀತಿಕತೆಗಳ ಗುಣವಿದೆ.  ಕತೆಗಾರನೂ ಆದ ಟಾಲ್ಸ್ ಟಾಯ್ ಈ ಕತೆಗಳಿಗೆ ತನ್ನ ಕಲೆಯ ಮಾಂತ್ರಿಕ ಸ್ಪರ್ಶವನ್ನು ನೀಡುತ್ತಾನೆ.

ಇತ್ತೀಚಿಗೆ ಅವನ ಎರಡು ಕತೆಗಳನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇವುಗಳನ್ನು ನೀವು ನನ್ನ ಬ್ಲಾಗ್ ನಲ್ಲಿ ಓದಬಹುದು. ಮೊದಲನೆಯದು 'ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ಕಾಯುತ್ತಾನೆ' ಎಂಬ ಕತೆ. ಎರಡನೆಯದು 'ಮನುಷ್ಯನಿಗೆ ಎಷ್ಟು ಜಮೀನು ಬೇಕು?' ಎಂಬ ನೀಳ್ಗತೆ.  ಕತೆಗಳನ್ನು ಓದಲು ಲಿಂಕ್ ಗಳನ್ನು ಅನುಸರಿಸಿ.

ಇಂದಿಗೂ ಈ ಕತೆಗಳು ಪ್ರಸ್ತುತವಾಗಿವೆ.  'ಮನುಷ್ಯನಿಗೆ ಎಷ್ಟು ಜಮೀನು ಬೇಕು?' ಎಂಬ ಕತೆ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ.

- ಸಿ ಪಿ ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)